ಸಾವೊ ಪೌಲೊ (ಬ್ರೆಜಿಲ್): ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (ಫ್ರಾನ್ಸ್) ಮತ್ತು ಫ್ಯಾಬಿಯಾನೊ ಕರುವಾನ (ಅಮೆರಿಕ) ನಡುವೆ ಗ್ರ್ಯಾಂಡ್ಚೆಸ್ ಟೂರ್ನ ಫೈನಲ್ ಪಂದ್ಯದ ಮೊದಲ ಕ್ಲಾಸಿಕಲ್ ಆಟ ಸುದೀರ್ಘ ಐದು ತಾಸುಗಳ ನಂತರ ಡ್ರಾ ಆಯಿತು. ಈ ಆಟ ಗುರುವಾರ 89 ನಡೆಗಳನ್ನು ಕಂಡಿತು.

ಮೂರನೇ ಸ್ಥಾನಕ್ಕಾಗಿ ಅಮೆರಿಕದ ಲೆವೋನ್ ಅರೋನಿಯನ್ ಮತ್ತು ಪ್ರಜ್ಞಾನಂದ ರಮೇಶ್ಬಾಬು ನಡುವೆ ನಡೆದ ಪಂದ್ಯದ ಮೊದಲ ಕ್ಲಾಸಿಕಲ್ ಆಟವೂ ಡ್ರಾ ಆಯಿತು. ಆದರೆ ಈ ಪಂದ್ಯ ಭಿನ್ನವಾಗಿ ಸಾಗಿತು. 15ನೇ ಕಾಣುವಷ್ಟರಲ್ಲಿ ಇಬ್ಬರೂ ‘ಕ್ವೀನ್’ಗಳನ್ನು ಕಳೆದುಕೊಂಡರು. ನಂತರವೂ ಯಾರೊಬ್ಬರೂ ಮೇಲುಗೈ ಸಾಧಿಸಲಾಗಲಿಲ್ಲ. ಈ ಪಂದ್ಯದಲ್ಲಿ ಕಪ್ಪು ಕಾಯಿಗಳಲ್ಲಿ ಆಡಿದ್ದ ಪ್ರಜ್ಞಾನಂದ ಅವರು ಎರಡನೇ ಕ್ಲಾಸಿಕಲ್ ಆಟದಲ್ಲಿ ಬಿಳಿ ಕಾಯಿಗಳನ್ನು ನಡೆಸುವರು.

ಬುಧವಾರ ಮುಗಿದ ಸೆಮಿಫೈನಲ್ ಪಂದ್ಯಗಳಲ್ಲಿ ಲಗ್ರಾವ್ ಅವರು ಟೈಬ್ರೇಕರ್ ಬ್ಲಿಟ್ಝ್ನಲ್ಲಿ ಪ್ರಜ್ಞಾನಂದ ಅವರನ್ನು, ಕರುವಾನ ಅವರು ಅರೋನಿಯನ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.