ಈ ಹಿಂದೆ ಶಾಂಘೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಾಮ್ ಅವರನ್ನು ಸೆಮಿಫೈನಲ್‌ಲ್ಲಿ ದೀಪಿಕಾ ಪರಾಭವಗೊಳಿಸಿ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ ಪ್ಯಾರಿಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ್ತಿ ಅದನ್ನು ಪುನರಾವರ್ತಿಸುವಲ್ಲಿ ವಿಫಲರಾದರು.
ಈ ಇಬ್ಬರು ಬಿಲ್ಗಾರ್ತಿಯರು ನಾಲ್ಕು ಸೆಟ್‌ಗಳ ನಂತರ 4–4 ಅಂಕಗಳ ಸಮಭಲ ಸಾಧಿಸಿದ್ದರು. ಆದರೆ ಐದನೇ ಸೆಟ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ನಾಮ್ ಸೆಮಿಫೈನಲ್ ಪ್ರವೇಶಿಸಿದರು.
ತಂಡ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕಾಗಿ ದೀಪಿಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ವೈಯಕ್ತಿಕ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೂ, 6 ಹಾಗೂ 7 ಅಂಕಗಳನ್ನಷ್ಟೇ ಪಡೆಯಲು ಶಕ್ತರಾದರು. ಈ ಸೋಲಿನ ಮೂಲಕ ಭಾರತದ ಬಿಲ್ಲುಗಾರರು ಈ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ.