ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics: ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿಯಲಿರುವ ಶೂಟರ್ ಭಾಕರ್

Published : 5 ಆಗಸ್ಟ್ 2024, 9:56 IST
Last Updated : 5 ಆಗಸ್ಟ್ 2024, 9:56 IST
ಫಾಲೋ ಮಾಡಿ
Comments

ಪ್ಯಾರಿಸ್: ಪ್ರಸಕ್ತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ 2 ಕಂಚಿನ ಪದಕ ತಂದುಕೊಟ್ಟ ಶೂಟರ್‌ ಮನು ಭಾಕರ್ ಅವರು ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಸಾಗುವ ಗೌರವಕ್ಕೆ ಭಾಜನರಾಗಿದ್ದಾರೆ.

ಭಾನುವಾರ ಪ್ರಸಕ್ತ ಒಲಿಂಪಿಕ್ಸ್‌ಗೆ ತೆರೆ ಬೀಳಲಿದೆ. ವೈಯಕ್ತಿಕ ಪಂದ್ಯದಲ್ಲಿ 10 ಮೀಟರ್ ಏರ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಭಾಕರ್ ಅವರು ದೇಶಕ್ಕೆ ಮೊದಲ ಪದಕ ತಂದುಕೊಟ್ಟರು. ನಂತರ ಸರಬಜೋತ್ ಸಿಂಗ್ ಅವರೊಂದಿಗೆ ಮಿಶ್ರ ತಂಡ ವಿಭಾಗದಲ್ಲಿ ಅವರು ಮತ್ತೊಂದು ಕಂಚಿಗೆ ಕೊರಳೊಡ್ಡಿದ್ದರು.

‘ಒಲಿಂಪಿಕ್ಸ್‌ನಲ್ಲಿ ಭಾಕರ್ ಅವರು, ಅದ್ಭುತವಾಗಿ ಆಡಿದ್ದಾರೆ. ಅವರು ಈ ಗೌರವಕ್ಕೆ ಅರ್ಹರು. ಹೀಗಾಗಿ ಮುಕ್ತಾಯ ಸಮಾರಂಭದಲ್ಲಿ ಭಾಕರ್ ಅವರು ದೇಶದ ಧ್ವಜವನ್ನು ಹಿಡಿಯಲಿದ್ದಾರೆ’ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಹೇಳಿದೆ.

ಈ ನಿರ್ಧಾರಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಹರಿಯಾಣದ 22 ವರ್ಷದ ಕ್ರೀಡಾಪಟು ಭಾಕರ್, ‘ಅಂಥದ್ದೊಂದು ಅವಕಾಶ ಸಿಕ್ಕರೆ ಅದು ನನ್ನ ಸೌಭಾಗ್ಯವೇ ಸರಿ. ದೇಶದ ಧ್ವಜ ಹಿಡಿದು ಸಾಗುವುದೇ ಒಬ್ಬ ಕ್ರೀಡಾಪಟುವಿಗೆ ದೊರಕುವ ಅತಿ ದೊಡ್ಡ ಗೌರವ. ಭಾರತದ ತಂಡದಲ್ಲಿ ಇಂಥ ಅರ್ಹರು ಹಲವರು ಇದ್ದಾರೆ’ ಎಂದಿದ್ದರು.

ಪುರುಷರಲ್ಲಿ ಭಾರತದ ಧ್ವಜ ಹಿಡಿಯುವವರು ಯಾರು ಎಂಬುದನ್ನು ಐಒಎ ಈವರೆಗೂ ನಿರ್ಧರಿಸಿಲ್ಲ. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಅದರ ಘೋಷಣೆಯಾಗುವ ಸಾಧ್ಯತೆ ಇದೆ.

2024ರ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅವರು 2 ಪದಕಗಳನ್ನು ಗೆದ್ದಿದ್ದಾರೆ. ಸ್ವಪ್ನಿಲ್ ಕುಸಾಳೆ ಅವರು 50 ಮೀಟರ್ ರೈಫಲ್‌ ಸ್ಪರ್ಧೆಯಲ್ಲಿ ದೇಶಕ್ಕೆ 3ನೇ ಪದಕ ತಂದುಕೊಟ್ಟಿದ್ದಾರೆ. 

ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಕಂಚಿನ ಪದಕಕ್ಕಾಗಿ ಇಂದು (ಸೋಮವಾರ) ಆಡಲಿದ್ದಾರೆ. ಪುರುಷರ ಹಾಕಿ ತಂಡವೂ ಸೆಮಿಫೈನಲ್ ಪ್ರವೇಶಿಸಿದ್ದು, ಪದಕ ಜಯಿಸುವ ಭರವಸೆ ಮೂಡಿಸಿದೆ.

ಕುಸ್ತಿಯಲ್ಲಿ ಮಹಿಳೆಯರು 68 ಕೆ.ಜಿ. ತೂಕದ ವಿಭಾಗದಲ್ಲಿ ನಿಶಾ ದಹಿಯಾ ಅವರು ಇಂದು (ಸೋಮವಾರ) ತಮ್ಮ ಪದಕ ಬೇಟೆ ಆರಂಭಿಸಲಿದ್ದಾರೆ. ಆ. 6ರಿಂದ ಜಾವ್ಲಿನ್ ತಾರೆ ನೀರಜ್ ಚೋಪ್ರಾ ಅವರು ತಮ್ಮ ಅಭಿಯಾನ ಆರಂಭಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT