ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಜಯದ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ

ಇಂದು ಐರ್ಲೆಂಡ್‌ ಎದುರು ಪಂದ್ಯ
Last Updated 29 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಐರ್ಲೆಂಡ್‌ ಎದುರು ಸೆಣಸಲಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳು ಇದುವರೆಗೂ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವಿನ ಸಿಹಿ ಸವಿದಿದೆ. ಆಸ್ಟ್ರೇಲಿಯಾ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಐರ್ಲೆಂಡ್‌ 10ನೇ ಸ್ಥಾನ ಹೊಂದಿದೆ.

ಕಾಂಗರೂಗಳ ನಾಡಿನ ಬಳಗ ವಿಶ್ವಕಪ್‌ನಲ್ಲಿ ಮೂರು ಬಾರಿ ಟ್ರೋಫಿ ಗೆದ್ದಿದೆ. 1986, 2010 ಮತ್ತು 2014ರಲ್ಲಿ ಈ ಸಾಧನೆ ಮಾಡಿತ್ತು. ಜೊತೆಗೆ ಒಲಿಂಪಿಕ್ಸ್‌ನಲ್ಲೂ ಪದಕಗಳನ್ನು ಜಯಿಸಿದ ಹಿರಿಮೆ ಹೊಂದಿದೆ.

ಕಾಲಿನ್‌ ಬಾಚ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಆಸ್ಟ್ರೇಲಿಯಾ ತಂಡದಲ್ಲಿ 10 ಮಂದಿ ಯುವ ಆಟಗಾರರಿದ್ದಾರೆ. ಇವರು ಮೊದಲ ಸಲ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಆ್ಯರನ್‌ ಜಲೆವ್‌ಸ್ಕಿ ಸಾರಥ್ಯದ ಈ ತಂಡ ಹಿಂದಿನ ಕೆಲ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದೆ. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಐರ್ಲೆಂಡ್‌ ತಂಡಕ್ಕೆ ವಿಶ್ವಕಪ್‌ ಚಿನ್ನ ಕೈಗೆಟುಕದಾಗಿದೆ. ಈ ತಂಡ ಇದುವರೆಗೂ ಎರಡು ಬಾರಿ (1978 ಮತ್ತು 1990) ಟೂರ್ನಿಯಲ್ಲಿ ಆಡಿದ್ದು 12ನೇ ಸ್ಥಾನ ಗಳಿಸಿದ್ದು ತಂಡದ ಉತ್ತಮ ಸಾಧನೆಯಾಗಿದೆ.

ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಐರ್ಲೆಂಡ್‌ ತಂಡ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಲು ಕಾಯುತ್ತಿದೆ.

ಇಂದಿನ ಪಂದ್ಯಗಳು
ಆಸ್ಟ್ರೇಲಿಯಾ–ಐರ್ಲೆಂಡ್‌
ಆರಂಭ: ಸಂಜೆ 5


*
ಇಂಗ್ಲೆಂಡ್‌–ಚೀನಾ
ಆರಂಭ: ರಾತ್ರಿ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT