ಹಾಂಗ್ಝೌ (ಪಿಟಿಐ): ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಭವಾನಿ ದೇವಿ ಅವರ ಯಶಸ್ಸಿನ ಓಟಕ್ಕೆ ಕ್ವಾರ್ಟರ್ ಫೈನಲ್ನಲ್ಲಿ ತೆರೆಬಿತ್ತು.

ಮಂಗಳವಾರ ನಡೆದ ಮಹಿಳೆಯರ ಸೇಬರ್ ವಿಭಾಗದ ಹಣಾಹಣಿಯಲ್ಲಿ ಭವಾನಿ 7–15 ರಿಂದ ಆತಿಥೇಯ ಚೀನಾದ ಯಕಿ ಶಾವೊ ಎದುರು ಪರಾಭವಗೊಂಡರು.

ಮೊದಲ ಅವಧಿಯಲ್ಲಿ ಭಾರತದ ಫೆನ್ಸರ್ ಮೂರು ‘ಟಚ್’ಗಳನ್ನು ಸಾಧಿಸಿದರೆ, ಚೀನಾದ ಎದುರಾಳಿ ಎಂಟು ‘ಟಚ್’ಗಳ ಮೂಲಕ 8–3 ರಲ್ಲಿ ಮೇಲುಗೈ ಪಡೆದರು. ಎರಡನೇ ಅವಧಿಯಲ್ಲಿ ಏಳು ಟಚ್ಗಳನ್ನು ಮಾಡಿದ ಶಾವೊ ಸೆಮಿಫೈನಲ್ಗೆ ಮುನ್ನಡೆದರು.

ಸೇಬರ್ ವಿಭಾಗದ ನಾಕೌಟ್ ಹಂತದ ಪೈಪೋಟಿಯಲ್ಲಿ ಮೊದಲು 15 ಟಚ್ಗಳನ್ನು ಮಾಡುವವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ.

30 ವರ್ಷದ ಭವಾನಿ ಲೀಗ್ ಹಂತದಲ್ಲಿ ಐವರನ್ನು ಮಣಿಸಿದ್ದರಲ್ಲದೆ, ಪ್ರಿ ಕ್ವಾರ್ಟರ್ನಲ್ಲಿ 15–9 ರಿಂದ ತೊನ್ಖಾವ್ ಫೊಕೆವ್ ವಿರುದ್ಧ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.