ಪ್ಯಾರಿಸ್: ರೋಲ್ಯಾಂಡ್ ಗ್ಯಾರೋಸ್ನಲ್ಲಿ ಸತತ ನಾಲ್ಕನೇ ಪ್ರಶಸ್ತಿ ಜಯದ ಛಲದಲ್ಲಿರುವ ಇಗಾ ಶ್ವಾಂಟೆಕ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಹಾಲಿ ರನ್ನರ್ ಅಪ್ ಜಾಸ್ಮಿನ್ ಪಾವೊಲಿನಿ ಅವರ ಅಭಿಯಾನ ನಾಲ್ಕನೇ ಸುತ್ತಿನಲ್ಲಿ ಕೊನೆಗೊಂಡಿತು.

ಮಹಿಳೆಯರ ಸಿಂಗಲ್ಸ್ನ ನಾಲ್ಕನೇ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಶ್ವಾಂಟೆಕ್ ಅವರು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 1-6, 6-3, 7-5ರಿಂದ 12ನೇ ಶ್ರೇಯಾಂಕದ ಎಲೆನಾ ರಿಬಾಕಿನಾ (ಕಜಕಸ್ತಾನ) ಅವರನ್ನು ಮಣಿಸಿದರು. ಮೊದಲ ಸೆಟ್ನಲ್ಲಿ ಹಿನ್ನಡೆ ಅನುಭವಿಸಿದ್ದ ಪೋಲೆಂಡ್ನ ಆಟಗಾರ್ತಿ, ನಂತರ ಚೇತರಿಸಿಕೊಂಡು ಮೇಲುಗೈ ಸಾಧಿಸಿದರು. ಶ್ವಾಂಟೆಕ್ ಅವರು ಮುಂದಿನ ಸುತ್ತಿನಲ್ಲಿ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಅವರನ್ನು
ಎದುರಿಸಲಿದ್ದಾರೆ.

13ನೇ ಶ್ರೇಯಾಂಕದ ಎಲಿನಾ 4-6, 7-6 (8/6), 6-1ರ ಮೂರು ಸೆಟ್ಗಳ ರೋಚಕ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕದ ಜಾಸ್ಮಿನ್ (ಇಟಲಿ) ಅವರಿಗೆ ಆಘಾತ ನೀಡಿದರು. ಕಳೆದ ತಿಂಗಳು ಇಟಾಲಿಯನ್ ಓಪನ್ ಗೆದ್ದು ಬಂದಿದ್ದ ಜಾಸ್ಮಿನ್ಗೆ ಇಲ್ಲಿ ನಿರಾಸೆಯಾಯಿತು. ಅವರು ಕಳೆದ ವರ್ಷ ಫೈನಲ್ನಲ್ಲಿ ಶ್ವಾಂಟೆಕ್ ಅವರಿಗೆ ಮಣಿದಿದ್ದರು.

ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ ಅವರೂ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು. ಎಂಟನೇ ಶ್ರೇಯಾಂಕದ ಝೆಂಗ್ 7-6 (7/5), 1-6, 6-3 ರಿಂದ 19ನೇ ಶ್ರೇಯಾಂಕದ ರಷ್ಯಾದ ಲಿಯುಡ್ಮಿಲಾ ಸ್ಯಾಮ್ಸೊನೊವಾ ಅವರನ್ನು ಸೋಲಿಸಿದರು. ಚೀನಾದ 22 ವರ್ಷ ವಯಸ್ಸಿನ ಝೆಂಗ್, ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ.

ಪುರುಷರ ಸಿಂಗಲ್ಸ್ನಲ್ಲಿ 12ನೇ ಶ್ರೇಯಾಂಕದ ಟಾಮಿ ಪೌಲ್ 6-3, 6-3, 6-3ರಿಂದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್ ಅವರನ್ನು ಸೋಲಿಸಿದರು. ಇದರೊಂದಿಗೆ 22 ವರ್ಷಗಳ ಬಳಿಕ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಅಮೆರಿಕದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2003ರಲ್ಲಿ ಅಮೆರಿಕದ ಆ್ಯಂಡ್ರೆ ಅಗಾಸಿ ಕೊನೆಯ ಬಾರಿ ಇಲ್ಲಿ ಎಂಟರ ಘಟ್ಟ ತಲುಪಿದ್ದರು.

ನಾಲ್ಕನೇ ಸುತ್ತಿಗೆ ಜೊಕೊವಿಚ್: ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ನಲ್ಲಿ ನಾಲ್ಕನೇ ಸುತ್ತು ತಲುಪಿದರು.

ಶನಿವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಜೊಕೊವಿಚ್ 6-3, 6-4, 6-2ರ ನೇರ ಸೆಟ್ಗಳಿಂದ ಆಸ್ಟ್ರಿಯಾದ ಫಿಲಿಪ್ ಮಿಸೋಲಿಕ್ ಅವರನ್ನು ಸೋಲಿಸಿದರು.

38 ವರ್ಷ ವಯಸ್ಸಿನ ಜೊಕೊವಿಚ್ ಅವರು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 81ನೇ ಕ್ರಮಾಂಕದ ಕ್ಯಾಮರೂನ್ ನಾರ್ರಿ (ಬ್ರಿಟನ್) ಅವರನ್ನು ಎದುರಿಸಲಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಜಿನೇವಾದಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಜೊಕೊವಿಚ್ ಮೂರು ಸೆಟ್ಗಳಲ್ಲಿ ನಾರ್ರಿ ಅವರನ್ನು ಸೋಲಿಸಿದ್ದರು.

ಭಾರತದ ಅಭಿಯಾನಕ್ಕೆ ತೆರೆ

ಪ್ಯಾರಿಸ್: ಅನುಭವಿ ಡಬಲ್ಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಅವರು ತಮ್ಮ ತಮ್ಮ ಜೊತೆಗಾರರೊಂದಿಗೆ ಭಾನುವಾರ ಮೂರನೇ ಸುತ್ತಿನಲ್ಲಿ ಹೊರಬಿದ್ದರು. ಇದರೊಂದಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯರ ಅಭಿಯಾನಕ್ಕೆ ತೆರೆಬಿತ್ತು.

ವಿಶ್ಪದ ಮಾಜಿ ಅಗ್ರಮಾನ್ಯ ಆಟಗಾರ, ಕರ್ನಾಟಕದ ಬೋಪಣ್ಣ ಮತ್ತು ಅವರ ಝೆಕ್ ರಿಪಬ್ಲಿಕ್ನ ಜೊತೆಗಾರ ಆ್ಯಡಂ ಪಾವ್ಲಾಸೆಕ್ ಅವರು ಪುರುಷರ ಡಬಲ್ಸ್ನ ಪಂದ್ಯದಲ್ಲಿ 2-6, 6-7(5) ರಿಂದ ಎರಡನೇ ಶ್ರೇಯಾಂಕದ ಹ್ಯಾರಿ ಹೆಲಿಯೊವಾರಾ ಮತ್ತು ಹೆನ್ರಿ ಪ್ಯಾಟನ್ (ಫಿನ್ಲ್ಯಾಂಡ್–ಬ್ರಿಟನ್) ಜೋಡಿಗೆ ಮಣಿದರು.

ಭಾಂಬ್ರಿ ಮತ್ತು ಅಮೆರಿಕದ ರಾಬರ್ಟ್ ಗಾಲೊವೆ ಜೋಡಿಯು 4-6, 4-6ರಿಂದ ಒಂಬತ್ತನೇ ಶ್ರೇಯಾಂಕದ ಅಮೆರಿಕದ ಕ್ರಿಶ್ಚಿಯನ್ ಹ್ಯಾರಿಸನ್ ಮತ್ತು ಇವಾನ್ ಕಿಂಗ್ (ಅಮೆರಿಕ) ಅವರಿಗೆ ಶರಣಾಯಿತು.

ಭಾರತದ ಎನ್.ಶ್ರೀರಾಮ್ ಬಾಲಾಜಿ ಮತ್ತು ರಿತ್ವಿಕ್ ಬೊಲ್ಲಿಪಳ್ಳಿ ಈ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಾನಸ್ಗೆ ಸೋಲು: ಭಾರತದ ಉದಯೋನ್ಮುಖ ಆಟಗಾರ ಮಾನಸ್ ಧಾಮ್ನೆ ಅವರು ಜೂನಿಯರ್ ವಿಭಾಗದಲ್ಲಿ ಬಾಲಕರ ಸಿಂಗಲ್ಸ್ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. 17 ವರ್ಷ ವಯಸ್ಸಿನ ಈ ಆಟಗಾರ 5-7, 3-6ರ ನೇರ ಸೆಟ್ಗಳಿಂದ ಅಮೆರಿದಕ ರೋನಿತ್ ಕರ್ಕಿಗೆ ಮಣಿದರು.

ಭಾರತದ ಮತ್ತೊಬ್ಬ ಆಟಗಾರ ಹಿತೇಶ್ ಚೌಹಾಣ್ ಬಾಲಕರ ಸಿಂಗಲ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದು, ಮೊದಲ ಸುತ್ತಿನಲ್ಲಿ ಸ್ವೀಡನ್ನ ಫ್ರೆಡ್ರಿಕ್ ಹೆಡೆ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.