ಮುಂಬೈ: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಗ್ಲೋಬಲ್ ಚೆಸ್ ಲೀಗ್ ಮೂರನೇ ಆವೃತ್ತಿಯಲ್ಲಿ ಐಕಾನ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಇದೇ ಶುಕ್ರವಾರ ಪ್ರಾಂಚೈಸಿಗಳಿಂದ ಆಟಗಾರರ ಆಯ್ಕೆ ನಡೆಯಲಿದೆ. ವಿಶ್ವನಾಥನ್ ಆನಂದ್, ಆರ್.ಪ್ರಜ್ಞಾನಂದ ಅವರೂ ಪಟ್ಟಿಯಲ್ಲಿದ್ದಾರೆ.

ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಭಾಗವಹಿಸಿದ್ದ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಈ ಬಾರಿ ಹಿಂದೆ ಸರಿದಿದ್ದಾರೆ. ಮೂರನೇ ವರ್ಷದ ಗ್ಲೋಬಲ್ ಚೆಸ್ ಲೀಗ್ (ಜಿಸಿಎಲ್) ಚೆನ್ನೈನಲ್ಲಿ ಡಿಸೆಂಬರ್ 13 ರಿಂದ 24ರವರೆಗೆ ನಡೆಯಲಿದೆ. ಆರು ಫ್ರಾಂಚೈಸಿಗಳಿವೆ.

ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ (ಹಾಲಿ ಚಾಂಪಿಯನ್), ಪಿಬಿಜಿ ಅಲಾಸ್ಕನ್ ನೈಟ್ಸ್, ಅಪ್ಗ್ರಾಡ್ ಮುಂಬಾ ಮಾಸ್ಟರ್ಸ್, ಗಂಗಾಸ್ ಗ್ರ್ಯಾಂಡ್ಮಾಸ್ಟರ್ಸ್, ಅಲ್ಪೈನ್ ಎಸ್ಜಿ ಪೈಪರ್ಸ್ ಮತ್ತು ಅಮೆರಿಕನ್ ಗ್ಯಾಂಬಿಟ್ಸ್ ಕಣದಲ್ಲಿವೆ.

ಟೆಕ್ ಮಹಿಂದ್ರ ಮತ್ತು ಫಿಡೆ ಸೇರಿಕೊಂಡು ಜಿಸಿಎಲ್ನ ನಡೆಸುತ್ತಿವೆ. ಅಮೆರಿಕದ ಹಿಕಾರು ನಕಾಮುರ, ಫ್ಯಾಬಿಯಾನೊ ಕರುವಾನ, ಅಲಿರೇಝಾ ಫಿರೋಜ, ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರು 36 ಆಟಗಾರರ ಕರಡು ಗುಂಪಿನಲ್ಲಿದ್ದಾರೆ. ಅನಿಶ್ ಗಿರಿ, ಅರ್ಜುನ್ ಇರಿಗೇಶಿ, ನಾಲ್ಕು ಬಾರಿಯ ಮಹಿಳಾ ವಿಶ್ವ ಚಾಂಪಿಯನ್ ಹೌ ಇಫಾನ್, ವಿಶ್ವಕಪ್ ರನ್ನರ್ ಅಪ್ ಕೋನೇರು ಹಂಪಿ ಸಹ ಆಯ್ಕೆಗೆ ಲಭ್ಯರಿರಲಿದ್ದಾರೆ.

ಪ್ರತಿಯೊಂದು ತಂಡದಲ್ಲಿ ಒಬ್ಬರು ಐಕಾನ್ ಆಟಗಾರ, ಇಬ್ಬರು ಪುರುಷರು, ಇಬ್ಬರು ಮಹಿಳೆಯರು, 21 ವರ್ಷದೊಳಗಿನ ಪ್ರತಿಭಾನ್ವಿತರೊಬ್ಬರು ಇರಬೇಕೆಂಬ ನಿಯಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.