ಕವಾಗೊಯ್, ಜಪಾನ್: ನಾಲ್ಕು ದಶಕಗಳ ಹಿಂದೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಕನಸು ಹೊತ್ತುಕೊಂಡು ತರಬೇತಿಗೆ ಹೊರಟ್ಟಿದ್ದ ಅಪ್ಪ ಅಪಘಾತದಲ್ಲಿ ತೀವ್ರ ಗಾಯಗೊಂಡು ಹಾಸಿಗೆ ಹಿಡಿದಿದ್ದರು. ಅಂದು ಅವರು ಕಂಡ ಕನಸು ಈಗ ಮಗ ಕ್ಸಾಂಡರ್ ಶಫಿಲಿ ಮೂಲಕ ನನಸಾಯಿತು.

ಕಸುಮಿಗಸೆಕಿ ಕಂಟ್ರಿ ಕ್ಲಬ್ನಲ್ಲಿ ನಡೆದ ಒಲಿಂಪಿಕ್ಸ್ ಗಾಲ್ಫ್ನಲ್ಲಿ ಚಿನ್ನ ಗೆದ್ದ ಅಮೆರಿಕದ ಕ್ಸಾಂಡರ್ ಪದಕವನ್ನು ತಂದೆಗೆ ಅರ್ಪಿಸಿದರು. ಸ್ಲೊವಾಕಿಯಾದ ರೋರಿ ಸಬಟಿನಿ ಅವರ ಪ್ರಬಲ ಪೈಪೋಟಿಯನ್ನು ಮೆಟ್ಟಿನಿಂತು ಅಮೋಘ ಆಟ ಪ್ರದರ್ಶಿಸಿದಕ್ಸಾಂಡರ್ ಗೆದ್ದು ಸಂಭ್ರಮಿಸಿದರು.

ಕ್ಸಾಂಡರ್ ತಂದೆ ಡೆಕಾಥ್ಲೀಟ್ ಆಗಿದ್ದರು. 40 ವರ್ಷಗಳ ಹಿಂದೆ ಒಲಿಂಪಿಕ್ಸ್ ಸಿದ್ಧತೆಯ ಸಂದರ್ಭದಲ್ಲಿ ಕಾರು ಅಪಘಾತದಲ್ಲಿ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದವು. ಎಡಗಣ್ಣಿಯ ದೃಷ್ಟಿ ಕಳೆದುಹೋಗಿತ್ತು.

ಭಾನುವಾರ ಬೆಳ್ಳಿ ಪದಕದ ಭರವಸೆಯೊಂದಿಗೆ ಕಣಕ್ಕೆ ಇಳಿದಿದ್ದ ಸ್ಥಳೀಯ ಗಾಲ್ಫರ್ ಹಿಡೆಕಿ ಮತ್ಸ್ಯುಯಾಮ ನಿರಾಸೆ ಅನುಭವಿಸಿದರು. ಸಬಟಿನಿ ರೋರಿ ಬೆಳ್ಳಿ ಗೆದ್ದರೆ ಅಚ್ಚರಿ ಮೂಡಿಸಿದ ಥೈವಾನ್ ಕ್ರೀಡಾಪಟು ಸಿ.ಟಿ.ಪನ್ ಕಂಚು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.