ಬೆಂಗಳೂರು: ಇಡೆಮಿತ್ಸು ಹೋಂಡಾ ರೇಸಿಂಗ್ ಇಂಡಿಯಾ ತಂಡದ ಚಾಲಕರಾದ ರಾಜೀವ್ ಸೇಥು ಮತ್ತು ಸೆಂಥಿಲ್ ಕುಮಾರ್ ಅವರು ಮಲೇಷ್ಯಾದ ಸೆಪಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ (ಎಆರ್‌ಆರ್‌ಸಿ) ಅಮೋಘ ಚಾಲನ ಕೌಶಲ ತೋರಿದರು.

ಏಷ್ಯಾ ಪ್ರೊಡಕ್ಷನ್ 250 ಸಿ.ಸಿ. (ಎಪಿ 250) ಕ್ಲಾಸ್‌ನಲ್ಲಿ ಸ್ಪರ್ಧಿಸಿದ್ದ ರಾಜೀವ್,ಭಾನುವಾರ ನಡೆದ ಆರನೇ ಸುತ್ತಿನ ಅಂತಿಮ ರೇಸ್‌ನಲ್ಲಿ ಒಂದು ಪಾಯಿಂಟ್ ಗಳಿಸಿದರು. ಈ ಮೂಲಕ ಅಗ್ರ 15ರೊಳಗೆ ಸ್ಥಾನ ಗಳಿಸಿದರು.

18ರ ಹರೆಯದ ಸೆಂಥಿಲ್ ಒಟ್ಟಾರೆ ಜಂಟಿ 26ನೇ ಸ್ಥಾನ ಪಡೆದರು.

ಎಂಟನೇ ಸಾಲಿನಿಂದ ಸ್ಪರ್ಧೆ ಆರಂಭಿಸಿದ್ದ ಸೆಂಥಿಲ್, ಎರಡನೇ ಲ್ಯಾಪ್‌ನಲ್ಲಿ ಚೀನಾ ತೈಪೆಯ ಲಿವು ಜುನ್‌ಮೀ ಮತ್ತು ಥಾಯ್ಲೆಂಡ್‌ನ ಸವಪೊಲ್ ಅವರನ್ನು ಹಿಂದಿಕ್ಕಿದರು. ನಂತರದ ಲ್ಯಾಪ್‌ಗಳಲ್ಲೂ ಅವರಿಂದ ಉತ್ತಮ ಸಾಮರ್ಥ್ಯ ಮೂಡಿಬಂತು.

ಒಟ್ಟು 33 ಪಾಯಿಂಟ್ಸ್ ಗಳಿಸಿರುವ ಹೋಂಡಾ ರೇಸಿಂಗ್ ಇಂಡಿಯಾ ತಂಡವು ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆಯಿತು. ಏಳನೇ ಸುತ್ತಿನ ರೇಸ್ ಥಾಯ್ಲೆಂಡ್‌ನ ಬುರಿರಾಮ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.