ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ವಾರ್ಸಿಟಿ ಗೇಮ್ಸ್‌: ಭಾರತಕ್ಕೆ ಬೆಳ್ಳಿ, ಕಂಚು

Published 2 ಆಗಸ್ಟ್ 2023, 23:36 IST
Last Updated 2 ಆಗಸ್ಟ್ 2023, 23:36 IST
ಅಕ್ಷರ ಗಾತ್ರ

ಚೆಂಗ್ಡು: ಭಾರತದ ಶೂಟರ್‌ಗಳಾದ ಇಳವೆನಿಲ್ ವಳರಿವನ್ ಮತ್ತು ದಿವ್ಯಾಂಶ್ ಸಿಂಗ್ ಜೋಡಿಯು ವಿಶ್ವ ಯೂನಿವರ್ಸಿಟಿ ಗೇಮ್ಸ್‌ನ 10 ಮೀಟರ್‌ ಏರ್‌ ರೈಫಲ್‌ ಮಿಕ್ಸೆಡ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದೆ.

ಚಿನ್ನದ ಪದಕಕ್ಕಾಗಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಜೋಡಿಯು 13-17ರಿಂದ ಚೀನಾದ ಯು ಝಾಂಗ್ ಮತ್ತು ಬುಹಾನ್ ಸಾಂಗ್ ವಿರುದ್ಧ ಪರಾಭವಗೊಂಡಿತು.

ವಳರಿವನ್ ಮತ್ತು ವಿವ್ಯಾಂಶ್‌ ಜೋಡಿ ಒಂದನೇ ಅರ್ಹತಾ ಹಂತದಲ್ಲಿ 635.3 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಚೀನಾದ ಜೋಡಿಯು 629.7 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿತ್ತು. ಎರಡನೇ ಅರ್ಹತಾ ಹಂತದಲ್ಲಿ ಭಾರತದ ಜೋಡಿ 421.3 ಅಂಕಗಳೊಂದಿಗೆ ಮತ್ತೆ ಅಗ್ರ ಸ್ಥಾನ ಪಡೆದರೆ, ಚೀನಾ 420.7 ಅಂಕದೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಭಾರತದ ಶೂಟರ್‌ಗಳು ಮುಗ್ಗರಿಸಿದರು.

ಭಾರತದ ಭವಾನಿ ಯಾದವ ಭಗವತಿ ಅವರು ಮಹಿಳೆಯರ ಲಾಂಗ್‌ಜಂಪ್‌ನಲ್ಲಿ 6.32 ಮೀ ದೂರ ಜಿಗಿದು ಕಂಚಿನ ಪದಕ ಗೆದ್ದರು.

ಭಾರತವು 11 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಅಗ್ರಸ್ಥಾನದಲ್ಲಿದ್ದರೆ, ಕೊರಿಯಾ ಮತ್ತು ಜಪಾನ್ ನಂತರದ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT