ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಮಂಗಳವಾರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅನ್ನು ಮುಂದಿನ ನಾಲ್ಕು ವರ್ಷಗಳ ಅವಧಿಗೆ ತನ್ನ ಅಧಿಕೃತ ಮುಖ್ಯ ಪ್ರಾಯೋಜಕರನ್ನಾಗಿ ಘೋಷಿಸಿದೆ.

ಐಒಎ ಮತ್ತು ಬಿಪಿಸಿಎಲ್ ನಡುವಿನ ಪಾಲುದಾರಿಕೆ ಒಪ್ಪಂದವು ಪ್ಯಾರಿಸ್ ಒಲಿಂಪಿಕ್ಸ್ನಿಂದ 2028ರ ಲಾಸ್ ಏಂಜಲೀಸ್ ಕೂಟದವರೆಗೆ ಚಾಲ್ತಿಯಲ್ಲಿರಲಿದೆ. ಈ ಮಧ್ಯೆ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡೆಗಳು, ಬೇಸಿಗೆ ಯೂತ್ ಒಲಿಂಪಿಕ್ಸ್, ಚಳಿಗಾಲದ ಒಲಿಂಪಿಕ್ಸ್ ಮತ್ತು ಚಳಿಗಾಲದ ಯೂತ್ ಒಲಿಂಪಿಕ್ಸ್ಗಳನ್ನು ಪ್ರಾಯೋಜಕತ್ವ ಒಳಗೊಳ್ಳುತ್ತದೆ.

ಭಾರತದ ಕ್ರೀಡಾಪಟುಗಳ ಪ್ರತಿಭೆಯನ್ನು ಬೆಂಬಲಿಸಲು ಐಒಎ ಜೊತೆಗೆ ಮುಂದಿನ ನಾಲ್ಕು ವರ್ಷ ಕೈಜೋಡಿಸಿರುವ ಬಿಪಿಸಿಎಲ್ಗೆ ಧನ್ಯವಾದಗಳು. ಈ ಪಾಲುದಾರಿಕೆಯು ಕ್ರೀಡಾ ಪ್ರತಿಭೆಯನ್ನು ಪೋಷಿಸುವ ಅದರ ಬದ್ಧತೆಯನ್ನು ಸೂಚಿಸುತ್ತದೆ’ ಎಂದು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಮ್ಮ ಬೆಂಬಲವು ಕ್ರೀಡಾಪಟುಗಳ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. ಕ್ರೀಡಾಪಟುಗಳ ಆಕಾಂಕ್ಷೆಗಳಿಗೆ ನೀರೆರೆಯುವ ಕೆಲಸವನ್ನು ಬಿಪಿಸಿಎಲ್ ಮಾಡಲಿದೆ. ಭಾರತ ಒಲಿಂಪಿಕ್ ಸಂಸ್ಥೆಯೊಂದಿಗೆ ಪಾಲುದಾರರಾಗಲು ತುಂಬಾ ಸಂತೋಷಪಡುತ್ತೇವೆ’ ಎಂದು ಬಿಪಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ. ಕೃಷ್ಣಕುಮಾರ್ ಹೇಳಿದ್ದಾರೆ.

ಬಿಪಿಸಿಎಲ್ ಈಗಾಗಲೇ ಸಾಕಷ್ಟು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದೆ. ಅದರಲ್ಲೂ 1980ರ ಮಾಸ್ಕೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಹಾಕಿ ತಂಡದಲ್ಲಿದ್ದ ಎಂ.ಎಂ. ಸೋಮಯ, 2016 ಮತ್ತು 2020ರ ಒಲಿಂಪಿಕ್ಸ್ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ವಿಜೇತರಾದ ಪಿ.ವಿ. ಸಿಂಧು ಅವರಿಗೆ ಉದ್ಯೋಗ ಕಲ್ಪಿಸಿದೆ. ಅಲ್ಲದೆ, ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಸೈನಾ ನೆಹ್ವಾಲ್, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ಐವರು ಇಲ್ಲಿ ಉದ್ಯೋಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.