ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಗ್ರಾಮದ ಮಂಚದಲ್ಲಿ ಕುಣಿದ ಜಿಮ್ನಾಸ್ಟ್‌!

ಕಾರ್ಡ್‌ಬೋರ್ಡ್‌ನಿಂದ ನಿರ್ಮಿಸಲಾಗಿದೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ ಆಯೋಜಕರು
Last Updated 19 ಜುಲೈ 2021, 14:28 IST
ಅಕ್ಷರ ಗಾತ್ರ

ಟೋಕಿಯೊ: ಕ್ರೀಡಾಗ್ರಾಮದ ಮಂಚಗಳು ಬಲಿಷ್ಠವಾಗಿಲ್ಲ, ಹೀಗಾಗಿ ಯಾರೂ ಅದರ ಮೇಲೆ ಲೈಂಗಿಕ ಕ್ರಿಯೆಗೆ ಮುಂದಾಗಬೇಡಿ ಎಂದು ಹರಡಿದ್ದ ಸುದ್ದಿಗೆ ಸ್ಪಷ್ಟನೆ ನೀಡಿರುವ ಒಲಿಂಪಿಕ್ಸ್ ಆಯೋಜಕರು ಮಂಚಗಳು ಬಲಿಷ್ಠವಾಗಿವೆ ಎಂದು ಸೋಮವಾರ ಹೇಳಿದ್ದಾರೆ.

ಆಯೋಜಕರ ಹೇಳಿಕೆಗೆ ಪೂರಕವೆಂಬಂತೆ ಐರ್ಲೆಂಡ್‌ನ ಜಿಮ್ನಾಸ್ಟ್‌ರೀಸ್ ಮೆಕ್ಲೀನಿಘನ್ ಮಂಚದ ಮೇಲೆ ಕುಣಿದಾಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಸುದ್ದಿಯಾಗಿದ್ದಾರೆ.

ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗುತ್ತದೆ ಎಂಬ ಕಾರಣದಿಂದ ಒಬ್ಬರಿಗೆ ಮಾತ್ರ ಮಲಗಲು ಸಾಧ್ಯವಾಗುವ ಮಂಚಗಳನ್ನು ನಿರ್ಮಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಸುದ್ದಿಯಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಆಯೋಜಕರು ಅಧಿಕೃತ ಟ್ವಿಟರ್ ಖಾತೆಯಲ್ಲಿರೀಸ್ ಮೆಕ್ಲೀನಿಘನ್ ಅವರ ವಿಡಿಯೊವನ್ನು ಪೋಸ್ಟ್ ಮಾಡಿ ಸುಳ್ಳು ಸುದ್ದಿಗೆ ಪೆಟ್ಟು ನೀಡಿದ್ದಕ್ಕೆ ಕೃತಜ್ಞತೆಗಳು ಎಂದಿದ್ದಾರೆ.

ಕ್ರೀಡಾಪಟುಗಳು ಅಂತರ ಕಾಯ್ದುಕೊಳ್ಳುವುದಕ್ಕಾಗಿ ಇಬ್ಬರು ಕುಳಿತುಕೊಂಡರೆ ಮುರಿಯುವ, ಕಾರ್ಡ್‌ಬೋರ್ಡ್‌ನಿಂದ ನಿರ್ಮಿಸಿದ ಮಂಚಗಳನ್ನು ಕ್ರೀಡಾಗ್ರಾಮದಲ್ಲಿ ಅಳವಡಿಸಲಾಗಿದೆ ಎಂದು ಅಮೆರಿಕದ ದೂರ ಅಂತರದ ಓಟಗಾರ ಪೌಲ್ ಖೆಲಿಮೊ ಟ್ವೀಟ್ ಮಾಡಿದ್ದರು. ಇದರ ಆಧಾರದಲ್ಲಿ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿತ್ತು.

ಪ್ರತಿ ಮಂಚ 200 ಕಿಲೊಗ್ರಾಂ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ ಎಂದು ಮಂಚಗಳನ್ನು ನಿರ್ಮಿಸಿದ ಏರ್‌ವೀವ್‌ ಕಂಪನಿ ಜನವರಿಯಲ್ಲಿ ತಿಳಿಸಿತ್ತು. ಆಸ್ಟ್ರೇಲಿಯಾದ ಬ್ಯಾಸ್ಕೆಟ್‌ಬಾಲ್ ಆಟಗಾರ ಆ್ಯಂಡ್ರ್ಯೂ ಬೋಗುಟ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಏರ್‌ವೀವ್‌ ಈ ಸ್ಪಷ್ಟನೆ ನೀಡಿತ್ತು.

‘ಮಂಚದ ಮೇಲೆ ಭಾರವಾದ ವಸ್ತುಗಳನ್ನು ಎತ್ತಿ ಹಾಕಿ ಪರೀಕ್ಷೆ ನಡೆಸಲಾಗಿದೆ. ಇಬ್ಬರು ಮಲಗಿದರೂ ಮಂಚಕ್ಕೆ ಏನೂ ಸಂಭವಿಸದು’ ಎಂದು ವಕ್ತಾರರು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT