ನಿಂಗ್ಬೊ (ಚೀನಾ): ಭಾರತದ ಭವೇಶ್ ಶೆಖಾವತ್ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ಪುರುಷರ 25 ಮೀಟರ್ ರ್ಯಾಪಿಡ್ ಪಿಸ್ತೂಲ್ ಸ್ಪರ್ಧೆಯ (ಆರ್ಪಿಎಫ್) ಮೊದಲ ಹಂತದ ಕ್ವಾಲಿಫಿಕೇಷನ್ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಅದರೊಂದಿಗೆ ಫೈನಲ್ ಸುತ್ತು ಪ್ರವೇಶಿಸುವ ಭರವಸೆ ಮೂಡಿಸಿದರು.

ಭವೇಶ್ 293 ಪಾಯಿಂಟ್ಸ್ ಪಡೆದರೆ, ಸ್ಪರ್ಧೆಯಲ್ಲಿದ್ದ ಭಾರತದ ಪ್ರದೀಪ್ ಸಿಂಗ್ ಶೆಖಾವತ್ (288) 24ನೇ ಹಾಗೂ ಮನದೀಪ್ ಸಿಂಗ್ (272) 43ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

ಭವೇಶ್ ಅವರು ಎರಡನೇ ಹಂತದ ಕ್ವಾಲಿಫಿಕೇಷನ್ನಲ್ಲಿಯೂ ಉತ್ತಮ ಪ್ರದರ್ಶನದೊಂದಿಗೆ ಫೈನಲ್ ಸುತ್ತಿಗೇರಿ, ಪದಕಕ್ಕೆ ಗುರಿಯಿಡುವ ನಿರೀಕ್ಷೆ ಹೊತ್ತಿದ್ದಾರೆ.

ಮಹಿಳೆಯರ 50 ಮೀ. ರೈಫಲ್ ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಭಾರತದ ಶೂಟರ್ಗಳು ಫೈನಲ್ ತಲುಪುವಲ್ಲಿ ವಿಫಲರಾದರು. ಕ್ವಾಲಿಫಿಕೇಷನ್ ಸುತ್ತಿನಲ್ಲಿ ಮೆಹುಲಿ ಘೋಷ್ 583 ಅಂಕಗಳೊಡನೆ 23ನೇ ಸ್ಥಾನ ಪಡೆದು ನಿರಾಶೆ ಮೂಡಿಸಿದರು. ಮಾನಿನಿ ಕೌಶಿಕ್ (580) 45ನೇ ಹಾಗೂ ಸುರಭಿ ಭಾರದ್ವಾಜ್ (578) 52ನೇ ಸ್ಥಾನ ಪಡೆಯಲಷ್ಟೇ ಶಕ್ತವಾದರು.

ಕೂಟದಲ್ಲಿ ಭಾರತದ ಸ್ಪರ್ಧಿಗಳು ಈವರೆಗೆ ಯಾವುದೇ ವಿಭಾಗದಲ್ಲಿಯೂ ಫೈನಲ್ ತಲುಪಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.