ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುರಾಂಡ್‌ ಕಪ್‌: ಫೈನಲ್‌ಗೆ ಬಾಗನ್

Published 31 ಆಗಸ್ಟ್ 2023, 16:21 IST
Last Updated 31 ಆಗಸ್ಟ್ 2023, 16:21 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಎಫ್‌ಸಿ ಗೋವಾ ತಂಡವನ್ನು 2–1 ಗೋಲುಗಳಿಂದ ಮಣಿಸಿದ ಮೋಹನ್‌ ಬಾಗನ್‌ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಬಾಗನ್‌ ತಂಡ, ‘ಬದ್ಧ ಎದುರಾಳಿ’ ಈಸ್ಟ್‌ ಬೆಂಗಾಲ್‌ ವಿರುದ್ಧ ಪೈಪೋಟಿ ನಡೆಸಲಿದೆ. ಕೋಲ್ಕತ್ತದ ಈ ಎರಡು ‘ದೈತ್ಯ’ ತಂಡಗಳು 2004ರ ಫೈನಲ್‌ನಲ್ಲೂ ಎದುರಾಗಿದ್ದವು. ಆಗ ಈಸ್ಟ್‌ ಬೆಂಗಾಲ್‌ 2–1 ರಿಂದ ಗೆದ್ದಿತ್ತು. ಇವೆರಡು ತಂಡಗಳು ತಲಾ 16 ಸಲ ಡುರಾಂಡ್‌ ಕಪ್‌ ಗೆದ್ದುಕೊಂಡಿವೆ.

ನೋಅ ಸದೌಯಿ ಅವರು ಸೆಮಿಫೈನಲ್‌ ಪಂದ್ಯದ 23ನೇ ನಿಮಿಷದಲ್ಲಿ ಗೋಲು ಗಳಿಸಿ ಗೋವಾ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. 42ನೇ ನಿಮಿಷದಲ್ಲಿ ಪೆನಾಲ್ಟಿ ಶೂಟೌಟ್‌ ಅವಕಾಶದಲ್ಲಿ ಬಾಗನ್‌ ತಂಡದ ಜೇಸನ್ ಕಮಿಂಗ್‌, ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. 61ನೇ ನಿಮಿಷದಲ್ಲಿ ಅರ್ಮಾಂಡೊ ಸಾದಿಕು ಗೆಲುವಿನ ಗೋಲು ತಂದುಕೊಟ್ಟರು.

ಸಂದೇಶ್‌ ಜಿಂಗನ್‌ ನೀಡಿದ ಪಾಸ್‌ನಲ್ಲಿ ಅಲ್ಬೇನಿಯದ ಆಟಗಾರ ಸಾದಿಕು, ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಕಳೆದ ಕೆಲ ಪಂದ್ಯಗಳಲ್ಲಿ ಫಾರ್ಮ್‌ ಕಂಡುಕೊಳ್ಳಲು ಪರದಾಡಿದ್ದ ಅವರು ಮಹತ್ವದ ಹಣಾಹಣಿಯಲ್ಲಿ ತಂಡದ ನೆರವಿಗೆ ನಿಂತರು.

ಬಾಗನ್‌ ತಂಡ 2019ರ ಬಳಿಕ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಆ ವರ್ಷ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಗೋಕುಲಂ ಕೇರಳ ಎದುರು ಪರಾಭವಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT