ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್‌: ಭಾರತ ತಂಡದಲ್ಲಿ ಕರ್ನಾಟಕದ ಅಥ್ಲೀಟ್‌ಗಳು

Published : 10 ಸೆಪ್ಟೆಂಬರ್ 2024, 14:52 IST
Last Updated : 10 ಸೆಪ್ಟೆಂಬರ್ 2024, 14:52 IST
ಫಾಲೋ ಮಾಡಿ
Comments

ಬೆಂಗಳೂರು: ಚೆನ್ನೈನಲ್ಲಿ ಬುಧವಾರ ಆರಂಭವಾಗಲಿರುವ 4ನೇ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಐವರು ಅಥ್ಲೀಟ್‌ಗಳು ಸ್ಥಾನ ಪಡೆದಿದ್ದಾರೆ. 

ಬೋಪಣ್ಣ (800 ಮೀ ಓಟ), ಉನ್ನತಿ ಅಯ್ಯಪ್ಪ (ಮಹಿಳೆಯರ 100 ಮೀ ಹರ್ಡಲ್ಸ್‌, 200 ಮೀ ಓಟ), ನಿಯೊಲ್ ಕಾರ್ನೆಲಿಯೊ (4X100 ಮೀ ರಿಲೆ), ವಿ. ಸುಧೀಕ್ಷಾ (100 ಮೀ ಓಟ, 4X100 ಮೀ ರಿಲೆ), ಸಿ. ರಿಹಾನ್ (400 ಮೀ ಓಟ, 4X400 ಮೀ ರಿಲೆ) ಅವರು ಸ್ಪರ್ಧಿಸುವರು. ಶಿವಾನಂದ ಮತ್ತು  ಬಿಂದುರಾಣಿ ಅವರು ತರಬೇತುದಾರರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಎ. ರಾಜವೇಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT