ಬೆಂಗಳೂರು: ಕರ್ನಾಟಕದ ಕೀರ್ತನಾ ಪಾಂಡ್ಯನ್ ಅವರು ಫೈನಲ್ನಲ್ಲಿ 4–3 ರಿಂದ ತಮಿಳುನಾಡಿನ ಅನುಪಮಾ ರಾಮಚಂದ್ರನ್ ಅವರನ್ನು ಸೋಲಿಸಿ, ಡೆಹ್ರಾಡೂನ್ನಲ್ಲಿ ಶುಕ್ರವಾರ ರಾತ್ರಿ ಮುಕ್ತಾಯಗೊಂಡ ರಾಷ್ಟ್ರೀಯ 6–ರೆಡ್ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಧ್ವಜ್ ಹರಿಯಾ 6–3 ರಿಂದ ರೈಲ್ವೇಸ್ನ ಪುಷ್ಪೇಂದರ್ ಸಿಂಗ್ ಅವರನ್ನು ಮಣಿಸಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರು.

ಕಳೆದ ವರ್ಷವೂ ಚಾಂಪಿಯನ್ ಆಗಿದ್ದ ಕೀರ್ತನಾ ‘ಬೆಸ್ಟ್ ಆಫ್ 7 ಫ್ರೇಮ್ ಫೈನಲ್’ನ ಮೊದಲ ನಾಲ್ಕು ಫ್ರೇಮ್ಗಳ ನಂತರ 2–2 ರಲ್ಲಿ ಸಮ ಮಾಡಿಕೊಂಡಿದ್ದರು. ಐದನೇ ಫ್ರೇಮ್ನಲ್ಲಿ 34ರ ಬ್ರೇಕ್ನೊಡನೆ 3–2 ಮುನ್ನಡೆ ಪಡೆದರು. ಆದರೆ ಅನುಭವಿ ಅನುಪಮಾ ಪೈಪೋಟಿ ನೀಡಿ ಆರನೇಯದನ್ನು ಪಡೆದರು. ಆದರೆ ಅಂತಿಮ ಫ್ರೇಮ್ಅನ್ನು ಎಚ್ಚರಿಕೆವಹಿಸಿ 48–14ರಲ್ಲಿ ಪಡೆದು ಪಂದ್ಯವನ್ನೂ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.