ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ರ‍್ಯಾಂಕಿಂಗ್‌ ಟೆನ್‌ಪಿನ್‌ ಬೌಲಿಂಗ್‌ ಲೀಗ್‌: ಕಿಶನ್‌,ಹಿತಾಶಾಗೆ ಪ್ರಶಸ್ತಿ

Published 30 ಮೇ 2024, 16:28 IST
Last Updated 30 ಮೇ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ಕಿಶನ್‌ ಆರ್‌. ಮತ್ತು ಹಿತಾಶಾ ಸಿಸೋಡಿಯಾ ಅವರು ಇಲ್ಲಿನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ಗುರುವಾರ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೆನ್‌ಪಿನ್‌ ಬೌಲಿಂಗ್‌ ಲೀಗ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪುರುಷರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಕಿಶನ್‌ (438) ಅವರು, ಮೂರನೇ ಶ್ರೇಯಾಂಕದ ಗಿರೀಶ್ ಗಾಬಾ (404) ಮತ್ತು ಪರ್ವೇಜ್‌ ಅಹಮ್ಮದ್‌ (384) ಅವರನ್ನು ಮಣಿಸಿ ಚಾಂಪಿಯನ್‌ ಆದರು.

ಇದಕ್ಕೂ ಮುನ್ನ ನಡೆದ ನಾಕೌಟ್‌ ಸುತ್ತಿನಲ್ಲಿ ಪರ್ವೇಜ್‌ (391) ಅವರು, ಅಕಾಶ್‌ ಅಶೋಕ್‌ ಕುಮಾರ್‌ (351) ಮತ್ತು ಜೇಮ್ಸ್‌ ಕ್ರಿಸ್ಟಿ ಅವರನ್ನು ಮಣಿಸಿದರು. ಕಿಶನ್‌ (365) ಅವರು, ಸತೀಶ್‌ ಎ.ವಿ (363) ಮತ್ತು ಸುರೇಂದ್ರ ಬಾಬು (250) ಅವರನ್ನು ಹಿಂದಿಕ್ಕಿದರು. ಗಿರೀಶ್‌ (357) ಅವರು, ಅನುರಾಗ್‌ ಪಿ. (298) ಮತ್ತು ಕಿಶನ್‌ ಸಿ (363) ಅವರನ್ನು ಸೋಲಿಸಿದ್ದರು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಹಿತಾಶಾ (314) ಅವರು, ಪ್ರೀಮಲ್ ಜೆ (303) ಮತ್ತು ಗೀತಾ ಪಿ. (302) ಅವರನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದರು.

ವಿಶೇಷ ಬಹುಮಾನ: ಪುರುಷರ ವಿಭಾಗದಲ್ಲಿ ಒಂದು ಮತ್ತು ಎರಡನೇ ರೌಂಡ್‌ನ 36 ಗೇಮ್ಸ್‌ಗಳಲ್ಲಿ ಹೆಚ್ಚು ಸರಾಸರಿ ಪಾಯಿಂಟ್ಸ್‌ ಗಳಿಸಿದ ಕಿಶನ್‌ (193) ಮತ್ತು ಆರು ಬ್ಲಾಕ್‌ಗಳಲ್ಲಿ 225 ಮತ್ತು ಅದಕ್ಕಿಂತ ಹೆಚ್ಚಿನ ಸ್ಕೋರ್‌ ಗಳಿಸಿದ ಕಿಶನ್ ಜೆ. (6) ಅವರಿಗೆ ವಿಶೇಷ ಬಹುಮಾನ ನೀಡಲಾಯಿತು. ಮಹಿಳೆಯರ ವಿಭಾಗದ ಎರಡೂ ಬಹುಮಾನ ಪ್ರಿಮಲ್‌ (174.75 ಮತ್ತು (5) ಅವರ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT