ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ನೆಲ್ಲಮಕ್ಕಡ, ಕರ್ತಮಾಡ ತಂಡಗಳಿಗೆ ಜಯ

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನಾಪೋಕ್ಲು: ಪ್ರತೀಕ್ ಪೂವಣ್ಣ, ಆಶಿಕ್ ಅಪ್ಪಣ್ಣ ಮತ್ತು ಅಯ್ಯಪ್ಪ ಅವರ ಗೋಲುಗಳ ನೆರವಿನಿಂದ ನೆಲ್ಲಮಕ್ಕಡ ತಂಡವು ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ ದಾಸಂಡ ತಂಡದ ವಿರುದ್ಧ 4-0 ಅಂತರದಿಂದ ಭರ್ಜರಿ ಜಯ ಗಳಿಸಿತು.

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರದ ಮತ್ತೊಂದು ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಲಾಭ ಪಡೆದ ಕರೋಟಿರ ತಂಡವು 4-3ರಲ್ಲಿ ಬೊಳ್ಳೇಪಂಡ ವಿರುದ್ಧ ಜಯ ಸಾಧಿಸಿತು.

ಕೊಕ್ಕಂಡ 6-5 ರಲ್ಲಿ ಕಡಿಯಮಾಡ ವಿರುದ್ಧ ಹಾಗೂ ಅಪ್ಪಚಟ್ಟೋಳಂಡ ತಂಡ ಮಚ್ಚಾರಂಡ ವಿರುದ್ಧ 5-4 ರಲ್ಲಿ ಗೆಲುವು ಸಾಧಿಸಿತು.

ಕರ್ತಮಾಡ ತಂಡ ಮೊಣ್ಣಂಡ ವಿರುದ್ಧ 3- 0ರಲ್ಲಿ; ಕಲ್ಯಾಟಂಡ ತಂಡ ಮಾದಂಡ ವಿರುದ್ಧ 1-0 ರಲ್ಲಿ; ಅರೆಯಡ ಅಮ್ಮಂಡ ವಿರುದ್ಧ 2-0 ರಲ್ಲಿ ಹಾಗೂ ಮಂಡೆಪಂಡ ತಂಡವು ಅಪ್ಪಡೇರಂಡ ವಿರುದ್ಧ 4-1ರಲ್ಲಿ ಜಯ ಗಳಿಸಿತು.

ಪೆಮ್ಮಂಡ ತಂಡ ಮೂಕಳೆರ ವಿರುದ್ಧ 2-0ರಲ್ಲಿ; ಮುಕ್ಕಾಟಿರ (ಹರಿಹರ) ಬಾದುಮಂಡ ವಿರುದ್ಧ 3-0 ರಲ್ಲಿ; ನಾಗಂಡ ಅಜ್ಜಮಾಡ ವಿರುದ್ಧ 3- 2ರಲ್ಲಿ; ಐನಂಡ ಕಂಬೇಯಂಡ ವಿರುದ್ಧ 2-0ರಲ್ಲಿ ಹಾಗೂ ಮುರುವಂಡ ತಂಡವು ಮಂದನೆರವಂಡ ವಿರುದ್ಧ 5-0ರಲ್ಲಿ ಗೆಲುವು ಪಡೆಯಿತು.

217 ತಂಡಗಳ ನಿರ್ಗಮನ: ಕುಂಡ್ಯೋಳಂಡ ಹಾಕಿ ಉತ್ಸವ -2024 ರಲ್ಲಿ ಒಟ್ಟು 360 ತಂಡಗಳು ನೋಂದಾಯಿಸಿದ್ದು ಮಾರ್ಚ್ 30 ರಿಂದ ಇದುವರೆಗೆ 217 ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ. ಇಲ್ಲಿಯವರೆಗೆ ಒಟ್ಟು 511 ಗೋಲ್‌ ದಾಖಲಾಗಿವೆ. 32 ಮಹಿಳಾ ಆಟಗಾರರೂ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT