ನಂಟೆರೆ, ಫ್ರಾನ್ಸ್: ಅಮೆರಿಕದ ‘ಚಿನ್ನದ ಮೀನು’ ಕೇಟ್ ಲೆಡಕಿ 4X200 ಫ್ರೀಸ್ಟೈಲ್ ಮೀಟರ್ಸ್ ರಿಲೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಇದರೊಂದಿಗೆ ಅವರು ಒಲಿಂಪಿಕ್ಸ್ ಈಜಿನಲ್ಲಿ 13ನೇ ಪದಕ ಗೆದ್ದ ದಾಖಲೆ ಬರೆದರು. ಆಸ್ಟ್ರೇಲಿಯಾದ ತಂಡವು ಚಿನ್ನದ ಪದಕ ಜಯಿಸಿತು.
ಗುರುವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ 27 ವರ್ಷದ ಲೆಡೆಕಿ ಅವರು 1500 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಜಯಿಸಿದರು. ಅದರೊಂದಿಗೆ ಈ ವಿಭಾಗದಲ್ಲಿ ನಾಲ್ಕು ಪ್ರತ್ಯೇಕ ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಈಜುಪಟುವಾದರು.
4X200 ರಿಲೆಯಲ್ಲಿ ಆಸ್ಟ್ರೇಲಿಯಾದ ಮೊಲಿ ಒಕಾಲ್ಗನ್, ಲೇನಿ ಪಾಲಿಸ್ಟರ್, ಬ್ರಿಯಾನಾ ಥ್ರಾಸೆಲ್ ಮತ್ತು ಅರಿಯಾನ್ ಟಿಟ್ಮಸ್ ಅವರಿದ್ದ ತಂಡವು 7 ನಿಮಿಷ, 38.08ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದಿತು. ಇದು ಒಲಿಂಪಿಕ್ ದಾಖಲೆಯೂ ಹೌದು
ಅಮೆರಿಕ ತಂಡವು (7ನಿ, 40.86ಸೆ) ಹಾಗೂ ಚೀನಾ ತಂಡವು (7ನಿ,42.34ಸೆ) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದವು.