ಬರ್ಮಿಂಗ್‌ಹ್ಯಾಮ್:ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರು ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಮಣಿಕಾ 11-4, 11-8, 11-6, 12-10 ರಲ್ಲಿ ಆಸ್ಟ್ರೇಲಿಯಾದ ಜೀ ಮಿನ್‌ಯಂಗ್ ಅವರನ್ನು ಮಣಿಸಿದರು. 27 ವರ್ಷದ ಮಣಿಕಾ ಮುಂದಿನ ಪಂದ್ಯದಲ್ಲಿ ಸಿಂಗಪುರದ ಜಿಯಾನ್ ಜೆಂಗ್ ಎದುರು ಸೆಣಸುವರು.

ತುರುಸಿನ ಪೈಪೋಟಿ ಕಂಡುಬಂದ ಇನ್ನೊಂದು ಪಂದ್ಯದಲ್ಲಿ ಶ್ರೀಜಾ 8-11, 11-7, 12-14, 9-11, 11-4, 15-13, 12-10 ರಲ್ಲಿ ವೇಲ್ಸ್‌ನ ಚಾರ್ಲೊಟ್ ಕೇರಿ ಎದುರು ಗೆದ್ದರು. 1–3 ಗೇಮ್‌ಗಳಿಂದ ಹಿನ್ನಡೆ ಅನುಭವಿಸಿದ್ದ ಶ್ರೀಜಾ, ಆ ಬಳಿಕ ಅಮೋಘ ರೀತಿಯಲ್ಲಿ ತಿರುಗೇಟು ನೀಡಿ ಗೆಲುವು ಒಲಿಸಿಕೊಂಡರು.

24 ವರ್ಷದ ಶ್ರೀಜಾ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಮೊ ಜಾಂಗ್ ಅವರ ಸವಾಲು ಎದುರಿಸುವರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಾತ್ರಾ ಮತ್ತು ಜಿ. ಸತ್ಯನ್ 11-7, 11-6, 11-7 ರಲ್ಲಿ ನೈಜೀರಿಯದ ಒಲಾಜಿದ್ ಒಮೊಟಯೊ– ಅಜೊಕ್ ಒಜೊಮು ಎದುರು ಗೆದ್ದು ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.

ಶ್ರೀಜಾ ಮತ್ತು ಅಚಂತಾ ಶರತ್ ಕಮಲ್ 5-11, 11-2, 11-6, 11-5 ರಲ್ಲಿ ಮಲೇಷ್ಯಾದ ಲಿಯೊಂಡ್ ಚೀ ಫಾಂಗ್– ಹೊ ಯಿಂಗ್ ಅವರನ್ನು ಸೋಲಿಸಿದರು.

ರೀತ್ ಟೆನಿಸನ್ ಅವರು ಸಿಂಗಪುರದ ಫೆಂಗ್ ತಿಯಾನ್‌ವಿ ಎದುರು ಸೋತು ಹೊರಬಿದ್ದರು. ತಿಯಾನ್‌ವಿ 11-2, 11-4, 9-11, 11-3, 11-4 ರಲ್ಲಿ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.