ಟೋಕಿಯೊ: ಪುರುಷರ ಸೈಕ್ಲಿಂಗ್‌ನ ಕೀರಿನ್ ವಿಭಾಗದಲ್ಲಿ ಬ್ರಿಟನ್‌ನ ಜೇಸನ್ ಕೆನ್ನಿ ಮೋಡಿ ಮಾಡಿದರು.

ಕೊನೆಯ ನಾಲ್ಕು ಲ್ಯಾಪ್‌ಗಳಲ್ಲಿ ವೇಗ ಹೆಚ್ಚಿಸಿಕೊಂಡು ಗುರಿಯತ್ತ ಮುನ್ನುಗ್ಗಿದ ಅವರು ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ಒಲಿಂಪಿಕ್ಸ್ ಸೈಕ್ಲಿಂಗ್‌ನಲ್ಲಿ ಏಳು ಚಿನ್ನದ ಪದಕ ಜಯಿಸಿದ ಬ್ರಿಟನ್‌ನ ಮೊದಲ ಕ್ರೀಡಾಪಟು ಎಂಬ ಹಿರಿಮೆಗೂ ಭಾಜನರಾದರು.

ಮಲೇಷ್ಯಾದ ಮಹಮ್ಮದ್ ಅಜಿಜುಲ್ ಹಸ್ನಿ ಮತ್ತು ನೆದರ್ಲೆಂಡ್ಸ್‌ನ ಹ್ಯಾರಿ ಲ್ಯಾವರೆಸೆನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ವಿಜಯ ವೇದಿಕೆಯಲ್ಲಿ ಮಹಮ್ಮದ್ ಮತ್ತು ಹ್ಯಾರಿ, ಚಿನ್ನದ ಸಾಧಕ ಜೇಸನ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಆ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.