ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್‌ಗೆ ತೆರೆ: ದ.ಕನ್ನಡ ಸಮಗ್ರ ಚಾಂಪಿಯನ್ಸ್‌

Published : 17 ಸೆಪ್ಟೆಂಬರ್ 2024, 19:42 IST
Last Updated : 17 ಸೆಪ್ಟೆಂಬರ್ 2024, 19:42 IST
ಫಾಲೋ ಮಾಡಿ
Comments

ಮೈಸೂರು: ಪುರುಷ ಹಾಗೂ ಮಹಿಳೆಯರ ವಿಭಾಗಳೆರೆಡರಲ್ಲೂ ಪಾರಮ್ಯ ಮೆರೆದ ದಕ್ಷಿಣ ಕನ್ನಡ ಜಿಲ್ಲೆಯ ಅಥ್ಲೀಟ್‌ಗಳು ಮಂಗಳವಾರ ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಮತ್ತು 23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌ನಲ್ಲಿ ಸಮಗ್ರ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದರು.

ದಕ್ಷಿಣ ಕನ್ನಡ ತಂಡವು ಪುರುಷರ ವಿಭಾಗದಲ್ಲಿ 186 ಹಾಗೂ ಮಹಿಳೆಯರ ವಿಭಾಗದಲ್ಲಿ 216 ಅಂಕಗಳೊಂದಿಗೆ ಒಟ್ಟಾರೆ 402 ಅಂಕ ಕಲೆಹಾಕಿತು. ಜಿಲ್ಲೆಯ ಅಥ್ಲೀಟ್‌ಗಳು ಒಟ್ಟು 30 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನ ಪದಕಗಳ ಬೇಟೆಯಾಡಿದರು.

ಬೆಂಗಳೂರು ನಗರ ಜಿಲ್ಲೆಯ ಅಥ್ಲೀಟ್‌ಗಳು ಒಟ್ಟು 11 ಚಿನ್ನ, 17 ಬೆಳ್ಳಿ ಹಾಗೂ 20 ಕಂಚಿನೊಂದಿಗೆ 242 ಅಂಕ ಸಂಪಾದಿಸಿ ಮೊದಲ ರನ್ನರ್‌ ಅಪ್‌ ಆದರು. ಬೆಳಗಾವಿ ತಂಡವು 16 ಚಿನ್ನ, 9 ಬೆಳ್ಳಿ ಹಾಗೂ 8 ಕಂಚು ಸೇರಿ ಒಟ್ಟು 189 ಅಂಕಗಳೊಂದಿಗೆ ಎರಡನೇ ರನ್ನರ್‌ ಅಪ್‌ ಆಯಿತು.

ಶ್ರೇಷ್ಠ ಅಥ್ಲೀಟ್‌ಗಳು:


23 ವರ್ಷದ ಒಳಗಿನ ಪುರುಷರ ವಿಭಾಗದಲ್ಲಿ ಮೈಸೂರಿನ ಗಗನ್ ಗೌಡ ಹಾಗೂ ಮಹಿಳೆಯರ ವಿಭಾಗದಲ್ಲಿ ಉಡುಪಿಯ ಎಸ್.ಕೀರ್ತನಾ ಉತ್ತಮ ಅಥ್ಲೀಟ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. 20 ವರ್ಷದ ಒಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡದ ಸುಹಾಸ್ ಸುವರ್ಣ ಹಾಗೂ ಚಿಕ್ಕಮಗಳೂರಿನ ದಿಶಾ ಅಳಿಗೆ ಈ ಗೌರವಕ್ಕೆ ಪಾತ್ರರಾದರು.

14 ವರ್ಷದ ಒಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಲೋಹಿತ್‌ ಗೌಡ ಹಾಗೂ ಕೆ.ಪಿ. ಅದ್ವಿಕಾ, 16 ವರ್ಷದ ಒಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡದ ಆಯುಷ್‌ ಪ್ರಾಂಜಲ್‌ ಹಾಗೂ ಎಸ್. ಸುಚಿತ್ರಾ, 18 ವರ್ಷದ ಒಳಗಿನವರ ವಿಭಾಗದಲ್ಲಿ ಧಾರವಾಡದ ಸೈಯದ್‌ ಸಬೀರ್‌ ಹಾಗೂ ಉಡುಪಿಯ ಸ್ತುತಿ ಶೆಟ್ಟಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಅಥ್ಲೀಟ್‌ ಪ್ರಶಸ್ತಿ ಪಡೆದರು.

ಕೂಟ ದಾಖಲೆ


ಪುರುಷರ 23 ವರ್ಷದ ಒಳಗಿನವರ 5,000 ಮೀ ಓಟದಲ್ಲಿ ಬೆಂಗಳೂರಿನ ಎ.ಆರ್. ರೋಹಿತ್‌, 20 ವರ್ಷದ ಒಳಗಿನವರ ಪೋಲ್‌ವಾಲ್ಟ್‌ನಲ್ಲಿ ಬೆಂಗಳೂರಿನ ವೈ.ಎಂ. ಆದಿತ್ಯ, 18 ವರ್ಷದ ಒಳಗಿನವರ 400 ಮೀ ಓಟದಲ್ಲಿ ಧಾರವಾಡದ ಸೈಯದ್ ಸಬೀರ್, ಮಹಿಳೆಯರ 23 ವರ್ಷ ಒಳಗಿನವರ 100 ಮೀ. ಓಟದಲ್ಲಿ ಉಡುಪಿಯ ಎಸ್. ಕೀರ್ತನಾ, 20 ವರ್ಷದ ಒಳಗಿನವರ 400 ಮೀಟರ್ಸ್ ಓಟದಲ್ಲಿ ಚಿಕ್ಕಮಗಳೂರಿನ ದಿಶಾ ಅಳಿಗೆ ಕೊನೆಯ ದಿನ ಕೂಟ ದಾಖಲೆ ನಿರ್ಮಿಸಿದರು.

ಕೊನೆಯ ದಿನದ ಫಲಿತಾಂಶ: (ಪ್ರಥಮ ಸ್ಥಾನ ಪಡೆದವರು):


ಪುರುಷರು:


23 ವರ್ಷ ಒಳಗಿನವರು: 100 ಮೀ ಓಟ: ಗಗನ್‌ ಗೌಡ (ಮೈಸೂರು, ಕಾಲ: 10.60 ಸೆ); 400 ಮೀ ಓಟ: ಬಿ.ಎಚ್‌.ತುಷಾರ್ ವಸಂತ್ (ಬೆಳಗಾವಿ, ಕಾಲ: 48.81 ಸೆ); 400 ಮೀ ಹರ್ಡಲ್ಸ್‌: ಎನ್. ರಾಹುಲ್‌ ನಾಯಕ (ಮೈಸೂರು, ಕಾಲ: 54.24 ಸೆ); 5000 ಮೀ ಓಟ: ಎ.ಆರ್.ರೋಹಿತ್‌ (ಬೆಂಗಳೂರು, ಕಾಲ: 15ನಿ.03.45 ಸೆ); ಡೆಕಥ್ಲಾನ್‌: ತ್ರಿಲೋಕ್‌ ಒಡೆಯರ್‌ (ಯಾದಗಿರಿ, 5318 ಅಂಕ).

20 ವರ್ಷ ಒಳಗಿನವರು: ಡಿ.ಸಿ. ಮಾರ್ಕ್‌ ಆಂಥೋನಿ (ಉಡುಪಿ, ಕಾಲ: 11.00 ಸೆ); 400 ಮೀ. ಓಟ: ಭುವನ್‌ ಪೂಜೇರಿ (ಬೆಳಗಾವಿ, ಕಾಲ: 48.64 ಸೆ); 400 ಮೀ. ಹರ್ಡಲ್ಸ್‌: ಪಿ.ಭೂಷಣ್‌ ಸುನಿಲ್‌ (ಬೆಳಗಾವಿ, ಕಾಲ: 54.70 ಸೆ); 5000 ಮೀ ಓಟ: ಎಸ್‌. ವಿಜಯ್‌ (ಬೆಳಗಾವಿ , ಕಾಲ: 15ನಿ.29.42 ಸೆ); 3000 ಮೀ. ಸ್ಟೀಪಲ್ ಚೇಸ್: ಗಣಪತಿ ಯಲ್ಲಪ್ಪ (ಉ.ಕ., 9ನಿ, 32.56 ಸೆ); ಡೆಕಥ್ಲಾನ್‌: ಬಿ.ಎಸ್. ಸನತ್‌ (ದ.ಕ., 2375 ಅಂಕ); ಪೋಲ್‌ವಾಲ್ಟ್‌: ವೈ.ಎಂ. ಆದಿತ್ಯ (ಬೆಂಗಳೂರು, ಎತ್ತರ: 4.30 ಮೀ).

18 ವರ್ಷ ಒಳಗಿನವರು: 100 ಮೀ. ಓಟ: ಪಿ. ಚಿರಂತ್‌ (ಮೈಸೂರು, ಕಾಲ: 10.95 ಸೆ); 400 ಮೀ ಓಟ: ಸೈಯದ್ ಸಬೀರ್‌ (ಧಾರವಾಡ, ಕಾಲ: 48.10 ಸೆ); 5 ಕಿ.ಮೀ. ನಡಿಗೆ: ಜಿ. ವಿನಾಯಕ್‌ (ದ.ಕ, 27ನಿ.42.26 ಸೆ); ಷಾಟ್‌ಪಟ್‌: ಎಚ್‌.ಎಸ್. ಸುಹಾಸ್‌ (ಚಾಮರಾಜನಗರ, ದೂರ: 15.45 ಮೀ); ಲಾಂಗ್‌ ಜಂಪ್‌: ರೆಹಾನ್ ಕುಮಾರ್ (ದ.ಕ., 6.88 ಮೀ); ಹೆಪ್ಲಥಾನ್‌: ಕೆ.ಚಿನ್ಮಯ್‌ (ಚಿಕ್ಕಮಗಳೂರು, 3674 ಅಂಕ).

16 ವರ್ಷ ಒಳಗಿನವರು: ಪೆಂಟಥ್ಲಾನ್‌: ನೂಮನ್ ಅಹಮ್ಮದ್ ಶರೀಫ್ (ಚಿತ್ರದುರ್ಗ, 3181 ಅಂಕ): 60 ಮೀ ಓಟ: ಆಯುಷ್‌ ಪ್ರಜ್ವಲ್‌ (ದ.ಕ., ಕಾಲ: 7.16 ಸೆ); ಜಾವೆಲಿನ್‌: ಎನ್.ಪುಷ್ಪಕ್‌ (ಬೀದರ್‌).

14 ವರ್ಷ ಒಳಗಿನವರು: ಟ್ರಯಥ್ಲಾನ್ ಎ: ಜಿ. ಕೌಶಿಕ್‌ ಶೆಟ್ಟಿ (ದ.ಕ., 1886 ಅಂಕ); ಟ್ರಯಥ್ಲಾನ್‌ ಬಿ: ಬಿ.ಸಿ. ಲೋಹಿತ್‌ ಗೌಡ (ದ.ಕ., 2253 ಅಂಕ)

ಮಹಿಳೆಯರು:


23 ವರ್ಷದೊಳಗಿನವರು:
100 ಮೀ ಓಟ: ಎಸ್. ಕೀರ್ತನಾ (ಉಡುಪಿ, ಕಾಲ: 11.86 ಸೆ); 400 ಮೀ ಓಟ: ಅನ್ನಪೂರ್ಣ ಪಾಟೀಲ (ಬೆಳಗಾವಿ, ಕಾಲ: 1ನಿ.06:00 ಸೆ.); 400 ಮೀ. ಹರ್ಡಲ್ಸ್‌: ಆರ್. ದೀಕ್ಷಿತಾ (ದ.ಕ., ಕಾಲ: 1ನಿ.02.41 ಸೆ); 5,000 ಮೀ. ಓಟ: ಆರಾಧನಾ (ಬೆಂಗಳೂರು, ಕಾಲ: 17ನಿ.57.89 ಸೆ); ಲಾಂಗ್ ಜಂಪ್: ಪ್ರಿಯಾಂಕಾ (ದ.ಕ., ದೂರ: 5.43 ಮೀ); ಹೈಜಂಪ್‌: ಪಲ್ಲವಿ ಪಾಟೀಲ (ಗದಗ, ಎತ್ತರ: 1.70 ಮೀ); ಪೋಲ್‌ ವಾಲ್ಟ್‌: ಪ್ರೀತಿ (ದ.ಕ., ಎತ್ತರ: 2.80 ಮೀ); ಹೆಪ್ಲಥಾನ್: ಶ್ರಾವಣಿ ಸತೀಶ್‌ (ಬೆಳಗಾವಿ: 3549 ಅಂಕ).

20 ವರ್ಷದೊಳಗಿನವರು: 100 ಮೀ ಓಟ: ನಿಮೇಕ್ಷಾ ಸಿದ್ದಿ (ಉ.ಕ., ಕಾಲ:12.44 ಸೆ); 400 ಮೀ ಓಟ: ದಿಶಾ ಅಳಿಗೆ (ಚಿಕ್ಕಮಗಳೂರು, ಕಾಲ: 55.09 ಸೆ); 5000 ಮೀ. ಓಟ: ನೀತು ಕುಮಾರಿ (ರಾಮನಗರ, ಕಾಲ: 18ನಿ. 44.85 ಸೆ); 400 ಮೀ ಹರ್ಡಲ್ಸ್‌: ಎನ್.ಅಪೂರ್ವಾ ಆನಂದ್‌ (ಬೆಳಗಾವಿ, ಕಾಲ: 1ನಿ.06.82 ಸೆ); ಪೋಲ್‌ವಾಲ್ಟ್‌: ಭವಿತಾ ಶೆಟ್ಟಿ (ದ.ಕ., ಎತ್ತರ: 2.90 ಮೀ); 3000 ಮೀ ಸ್ಟೀಪಲ್‌ಚೇಸ್: ಎಚ್‌.ಎಂ.ಹರ್ಷಿತಾ (ಹಾವೇರಿ, ಕಾಲ: 32.50 ಸೆ.); ಹೆಪ್ಟಥ್ಲಾನ್: ನಿಂಗಮ್ಮ (ರಾಯಚೂರು, 2621 ಅಂಕ); ಹೈಜಂಪ್‌: ಎಲ್. ಲಿಖಿತಾ (ರಾಮನಗರ, 1.55 ಮೀ); ಲಾಂಪ್‌ ಜಂಪ್‌: ದೀಕ್ಷಾ ಗಣಪತಿ (ಮೈಸೂರು, ದೂರ: 5.82 ಮೀ).

18 ವರ್ಷದೊಳಗಿನವರು: 100 ಮೀ ಓಟ: ಸ್ತುತಿ ಶೆಟ್ಟಿ (ಉಡುಪಿ, ಕಾಲ: 12.24 ಸೆ); 400 ಮೀ. ಓಟ: ಪಿ. ಅಭಿಜ್ಙಾ (ಶಿವಮೊಗ್ಗ, 58.94 ಸೆ); 3000 ಸ್ಟೀಪಲ್‌ ರೇಸ್‌: ದಕ್ಷತಾ (ಬೆಳಗಾವಿ, 18 ನಿ.52.83 ಸೆ); ಹೈಜಂಪ್‌: ಪಿ. ಹರ್ಷಿತಾ (ರಾಮನಗರ, ಎತ್ತರ: 1.55 ಮೀ); ಜಾವೆಲಿನ್‌: ದಿಶಾ (ಬೀದರ್, ದೂರ: 36.90 ಮೀ); ಹೆಪ್ಲಥಾನ್‌: ಪಿ. ಹರ್ಷಿತಾ (ರಾಮನಗರ, 4063 ಅಂಕ).

16 ವರ್ಷಳಗಿನವರು: 60 ಮೀ ಓಟ: ಎಸ್. ಸುಚಿತ್ರಾ (ಬಳ್ಳಾರಿ, ದೂರ: 7.35 ಸೆ); ಲಾಂಗ್‌ಜಂಪ್‌: ಬಿ. ಹರಿಪ್ರಿಯಾ (ದ.ಕ., ದೂರ: 3.78 ಮೀ); ಪೆಂಟಥ್ಲಾನ್‌: ಅವನಿ ಗಣೇಶ್ (ಉಡುಪಿ, 3376 ಅಂಕ)

14 ವರ್ಷ ಒಳಗಿನವರು: ಟ್ರಯಥ್ಲಾನ್‌ ಎ: ಶಾಶ್ವತಿ ಸುರೇಶ್ (ಬೆಂಗಳೂರು. 2086 ಅಂಕ); ಟ್ರಯಥ್ಲಾನ್ ಬಿ: ಕೆ.ಪಿ. ಅದ್ವಿಕಾ (ದ.ಕ. 2473 ಅಂಕ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT