ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕಲಾವಿದ ಲಿಯಾನಾರ್ಡೊ ಡಾವಿಂಚಿ ಅವರ ‘ದಿ ಲಾಸ್ಟ್ ಸಪ್ಪರ್’ ಪೇಟಿಂಗ್ ಅನ್ನು ಡ್ರ್ಯಾಗ್ ಕ್ವೀನ್ಗಳಿಂದ ವಿಡಂಬನಾತ್ಮಕವಾಗಿ ಪ್ರದರ್ಶಿಸಿರುವುದು ಕ್ರೈಸ್ತ ಸಮುದಾಯದ ಕೋಪಕ್ಕೆ ಗುರಿಯಾಗಿದೆ. ವಿವಾದದ ಬೆನ್ನಲ್ಲೇ ಒಲಿಂಪಿಕ್ಸ್ ಆಯೋಜಕರು ಕ್ಷಮೆಯಾಚಿಸಿದ್ದಾರೆ.

ಉದ್ಘಾಟನಾ ಸಮಾರಂಭದ ಫೆಸ್ಟಿವಿಟಿ ವಿಭಾಗದಲ್ಲಿ ಫ್ರಾನ್ಸ್ ಪ್ರಸಿದ್ದ ಮೂವರು ಡ್ರ್ಯಾಗ್ ರೇಸ್ ಸ್ಪರ್ಧಿಗಳು ‘ಡ್ರ್ಯಾಕ್ ಆ್ಯಕ್ಟ್’ ಪ್ರದರ್ಶಿಸಿದ್ದರು. ಈ ಪ್ರದರ್ಶನವು ವ್ಯಾಪಕ ಟೀಕೆಗೆ ಒಳಗಾಗಿತ್ತು.

ವಿವಾದದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಪ್ಯಾರಿಸ್ ಒಲಿಂಪಿಕ್ಸ್–2024’ರ ವಕ್ತಾರ ಅನ್ನಿ ಡೆಸ್ಕ್ಯಾಂಪ್ಸ್, ‘ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿಸುವ ಉದ್ದೇಶ ಇರಲಿಲ್ಲ. ಉದ್ಘಾಟನಾ ಸಮಾರಂಭವು ಎಲ್ಲ ಸಮುದಾಯವನ್ನು ಒಳಗೊಳ್ಳುವ ಕಾರ್ಯಕ್ರಮವಾಗಿತ್ತು’ ಎಂದು ಹೇಳಿದ್ದಾರೆ.

‘ನಮ್ಮ ಉದ್ದೇಶವನ್ನು ಸಾಧಿಸಿದ್ದೇವೆ ಎಂದು ನಾವು ನಂಬಿದ್ದೇವೆ. ಇದರಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.