ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಮಾಲಿನ್ಯ ತಗ್ಗಿಸುವ ಗುರಿ

Published 16 ಮಾರ್ಚ್ 2024, 0:16 IST
Last Updated 16 ಮಾರ್ಚ್ 2024, 0:16 IST
ಅಕ್ಷರ ಗಾತ್ರ

ಪ್ಯಾರಿಸ್‌: ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯಿಂದ, ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರಿ ಊಟದ ವಿತರಣೆ ಮತ್ತು ಪ್ಲಾಸ್ಟಿಕ್ ಬಾಟಲ್‌ಗಳ ಬಳಕೆಯ ಮೇಲೆ ಕಟ್ಟುನಿಟ್ಟಿನ ಕಡಿವಾಣದಿಂದ ಮಾಲಿನ್ಯ ತಗ್ಗಿಸುವ ಗುರಿಹೊಂದಲಾಗಿದೆ. ಆದರೆ ಮೂಲಸೌಕರ್ಯ ನಿರ್ಮಾಣ ಚಟುವಟಿಕೆ, ಏರಲಿರುವ ವಿಮಾನ ಪ್ರಯಾಣಗಳಿಂದ ಮಾಲಿನ್ಯ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ಹವಾನಿಯಂತ್ರಿತ ಸ್ಟೇಡಿಯಂಗಳ ಜೊತೆ ಅದ್ಧೂರಿ ಮೂಲಸೌಕರ್ಯಗಳನ್ನು ಹೊಂದಿದ್ದ 2022ರ ಕತಾರ್‌ ವಿಶ್ವಕಪ್‌ ಫುಟ್‌ಬಾಲ್‌ಗೆ ಹೋಲಿಸಿದಲ್ಲಿ ಒಲಿಂಪಿಕ್ಸ್‌ ಸರಳ ಚಿತ್ರಣ ನೀಡಲಿದೆ.

‘ಪರಿಸರದ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ವಿಭಿನ್ನವಾಗಿ ಕ್ರೀಡೆಗಳನ್ನು ಸಂಘಟಿಸಲು ಸಾಧ್ಯ ಎಂಬುದನ್ನು ಪ್ಯಾರಿಸ್‌ 2024 ಪ್ರಯತ್ನ ತೋರಿಸಿಕೊಡಲಿದೆ’ ಎಂದು ಸಂಘಟನಾ ಸಮಿತಿಯ ಪರಿಸರ ಸಂರಕ್ಷಣೆ ವಿಭಾಗದ ನಿರ್ದೇಶಕ ಜಾರ್ಜಿನಾ ಗ್ರೀನ್ ಹೇಳಿದರು.

2012ರ ಲಂಡನ್ ಮತ್ತು 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ ವೇಳೆ ಹೊರಹೊಮ್ಮಿದ್ದ ಇಂಗಾಲದ ಪ್ರಮಾಣವನ್ನು ಅರ್ಧದಷ್ಟಕ್ಕೆ ಇಳಿಸುವ ಗುರಿಯನ್ನು ಸಂಘಟಕರು ಹೊಂದಿದ್ದಾರೆ.

ಒಲಿಂಪಿಕ್ಸ್‌ ವೇಳೆ ವಿಮಾನಗಳು ಹೆಚ್ಚಿನ ಪ್ರಮಾಣದಲ್ಲಿ ಬಂದುಹೋಗುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಲಿದೆ. ಆದರೆ ‘ನಾವು ಎಲ್ಲಾ ಟಿಕೆಟ್‌ಗಳನ್ನು ಇನ್ನೂ ಮಾರಾಟ ಮಾಡಿಲ್ಲ’ ಎಂದು ಜಾರ್ಜಿನಾ ತಿಳಿಸಿದ್ದಾರೆ.

ಹೊರಗಿನ ಸಲಹಾ ಸಂಸ್ಥೆಯೊಂದಕ್ಕೆ, ಪ್ರಯಾಣ, ನಿರ್ಮಾಣ ಚಟುವಟಿಕೆ, ಕೇಟರಿಂಗ್ ಮತ್ತು ಕ್ರೀಡಾ ಸಲಕರಣೆಗಳಿಂದಾಗುವ ಮಾಲಿನ್ಯದ ಪ್ರಮಾಣ ಲೆಕ್ಕಹಾಕುವ ಹೊಣೆ ವಹಿಸಲಾಗಿದೆ. ಇದರ ಅಂತಿಮ ವರದಿ ಅಕ್ಟೋಬರ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT