ಪ್ರಾಗ್: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಥಳೀಯ ಭರವಸೆ ಡೇವಿಡ್ ನವಾರ ಅವರ ಜೊತೆ ಗುರುವಾರ ಡ್ರಾ ಮಾಡಿಕೊಂಡರು.

ಕಣದಲ್ಲಿರುವ ಭಾರತದ ಎರಡನೇ ಆಟಗಾರ ಅರವಿಂದ ಚಿದಂಬರಮ್ ಕೂಡ ತಮ್ಮ ಪಂದ್ಯವನ್ನು ಇನ್ನೊಬ್ಬ ಆತಿಥೇಯ ಆಟಗಾರ ಗುಯೆನ್ ಥಾಯ್ ದೈ ಜೊತೆ ಡ್ರಾ ಮಾಡಿಕೊಂಡರು. ಮೊದಲ ಸುತ್ತಿನ ಐದು ಪಂದ್ಯಗಳಲ್ಲಿ ಎರಡರಲ್ಲಿ ಸೋಲು–ಗೆಲುವು ನಿರ್ಧಾರವಾಯಿತು.

ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ ಡಿ.ಗುಕೇಶ್ ಅವರ ನೆರವು ತಂಡದಲ್ಲಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರು ಅಚ್ಚರಿಯ ಫಲಿತಾಂಶದಲ್ಲಿ ಅಗ್ರ ಶ್ರೇಯಾಂಕದ ವಿ ಯೀ (ಚೀನಾ) ಅವರನ್ನು ಮಣಿಸಿದರು.

ಅಮೆರಿಕದ ಸ್ಯಾಮ್ ಶಂಕ್ಲಾಡ್ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಟರ್ಕಿಯ ಗುರೆಲ್ ಎಡಿಝ್ ಅವರನ್ನು ಮಣಿಸಿದರು.

ವಿಯೆಟ್ನಾಮ್ನ ಅಗ್ರ ಆಟಗಾರ ಕ್ವಾಂಗ್ ಲೀಮ್ ಲೀ ಅವರು ಇನ್ನೊಂದು ಪಂದ್ಯದಲ್ಲಿ ಹಾಲೆಂಡ್ನ ಅನಿಶ್ ಗಿರಿ ಜೊತೆ ಡ್ರಾ ಮಾಡಿಕೊಂಡರು. ಹತ್ತು ಆಟಗಾರರು ಕಣದಲ್ಲಿದ್ದು, ಒಟ್ಟು 9 ಸುತ್ತುಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.