ಪ್ರಾಗ್: ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಪ್ರಾಗ್ ಮಾಸ್ಟರ್ಸ್ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯ ಡ್ರಾ ಮಾಡಿಕೊಂಡರು. ಅವರು ಶುಕ್ರವಾರ ಟರ್ಕಿಯ ಎಡಿಲ್ ಗುರೆಝ್ ಜೊತೆ 46 ನಡೆಗಳ ನಂತರ ಪಾಯಿಂಟ್ ಹಂಚಿಕೊಂಡರು. ಭಾರತದ ಇನ್ನೊಬ್ಬ ಆಟಗಾರ ಅರವಿಂದ ಚಿದಂಬರಂ ಅವರು ಜರ್ಮನಿಯ ವಿನ್ಸೆಂಟ್ ಕೀಮರ್ ಅವರ ರಕ್ಷಣಾ ಕೋಟೆ ಛಿದ್ರಗೊಳಿಸಿ ಜಯಗಳಿಸಿದರು.

ಮೊದಲ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದ ಚಿದಂಬರಮ್ (1.5), ಎರಡನೇ ಪಂದ್ಯವನ್ನು ಕಪ್ಪುಕಾಯಿಗಳಲ್ಲಿ ಆಡಿ ಕೀಮರ್ (1) ವಿರುದ್ಧ ಜಯಗಳಿಸಿದರು. ಎರಡನೇ ಸುತ್ತಿನ ಐದು ಪಂದ್ಯಗಳಲ್ಲಿ ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು.

ಎರಡು ಸುತ್ತುಗಳ ಬಳಿಕ ಪ್ರಜ್ಞಾನಂದ ಒಂದು ಪಾಯಿಂಟ್, ಗುರೆಝ್ ಅರ್ಧ ಪಾಯಿಟ್ ಗಳಿಸಿದ್ದಾರೆ. ಚೀನಾದ ವೀ ಯಿ (0.5) ಅವರು ಹಾಲೆಂಡ್ ಅನಿಶ್ ಗಿರಿ (1) ಜೊತೆ; ಝೆಕ್ ಗಣರಾಜ್ಯದ ಗುಯೆನ್ ಥಾಯ್ ದೈವಾನ್ (1), ಅಮೆರಿಕದ ಸ್ಯಾಮ್ ಶಂಕ್ಲಾಡ್ (1.5) ಜೊತೆ; ಡೇವಿಡ್ ನವಾರ (1), ವಿಯೆಟ್ನಾಮಿನ ಲಿ ಕ್ವಾಂಗ್ ಲೀಮ್ (1) ಜೊತೆ ಪಾಯಿಂಟ್ ಹಂಚಿಕೊಂಡರು.

ಚಾಲೆಂಜರ್ ವಿಆಗದಲ್ಲಿ ಭಾರತದ ದಿವ್ಯಾ ದೇಶಮುಖ್ (1), ಝೆಕ್ ರಿಪಬ್ಲಿಕ್ನ ರಿಚರ್ಡ್ ಸ್ಟಾಲ್ಮಾಕ್ (0.5) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.