ವಿಶಾಖಪಟ್ಟಣ: ಅಮೀರ್ ಮೊಹಮ್ಮದ್ ಝಫರ್ದಾನೇಶ್ ಅವರ ಅಮೋಘ ರೇಡಿಂಗ್ ಬಲದಿಂದ ಯು ಮುಂಬಾ ತಂಡವು ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ ಒಂದು ಪಾಯಿಂಟ್ನಿಂದ ಪಟ್ನಾ ಪೈರೇಟ್ಸ್ ವಿರುದ್ಧ ರೋಚಕ ಜಯ ಸಾಧಿಸಿತು.

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಯು ಮುಂಬಾ 40–39ರಿಂದ ಪಟ್ನಾ ತಂಡದ ಸವಾಲನ್ನು ಮೀರಿ ನಿಂತಿತು. ಮೊದಲಾರ್ಧದಲ್ಲಿ ಯು ಮುಂಬಾ ತಂಡವು ಎಂಟು ಅಂಕಗಳ (23–15) ಮುನ್ನಡೆ ಪಡೆದು, ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಪಟ್ನಾ ತಂಡವು ತಿರುಗೇಟು ನೀಡುವ ಪ್ರಯತ್ನ ಮಾಡಿತಾದರೂ ಗೆಲುವು ಒಲಿಯಲಿಲ್ಲ.

ಯು ಮುಂಬಾ ಪರ ಅಮೀರ್ ಮೊಹಮ್ಮದ್ 12 ಅಂಕ ಗಳಿಸಿದರು. ಅವರಿಗೆ ಮತ್ತೊಬ್ಬ ರೇಡರ್ ಅನಿಲ್ ಮೋಹನ್ ಸಿಂಗ್ ಸಾಥ್ ನೀಡಿದರು. ಪಟ್ನಾ ತಂಡದ ಪರ ಅಯಾನ್ ಲೋಹ್ಚಾಬ್ 21 ಅಂಕ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. 15 ಅಂಕ ರೇಡಿಂಗ್ನಿಂದ ಮತ್ತು 6 ಅಂಕ ಬೋನಸ್ನಿಂದ ಸೂರೆ ಮಾಡಿ ಗಮನ ಸೆಳೆದರು.

ಯು ಮುಂಬಾ ತಂಡಕ್ಕೆ ಆರು ಪಂದ್ಯಗಳಲ್ಲಿ ಇದು ನಾಲ್ಕನೇ ಜಯವಾಗಿದೆ. ಪಟ್ನಾ ತಂಡಕ್ಕೆ ಐದು ಪಂದ್ಯಗಳಲ್ಲಿ ಇದು ನಾಲ್ಕನೇ ಸೋಲಾಗಿದೆ.

ಇಂದಿನ ಪಂದ್ಯಗಳು

ಜೈಪುರ ಪಿಂಕ್ ಪ್ಯಾಂಥರ್ಸ್– ಬೆಂಗಳೂರು ಬುಲ್ಸ್ (ರಾತ್ರಿ 8)

ತಮಿಳು ತಲೈವಾಸ್– ಬೆಂಗಾಲ್ ವಾರಿಯರ್ಸ್ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.