ಇಲ್ಲಿ ನಡೆದ ಫೈನಲ್‌ನ ಪಂದ್ಯವು ನಿಗದಿತ ಅವಧಿಯಲ್ಲಿ ತಲಾ ಮೂರು ಗೋಲುಗಳೊಂದಿಗೆ ಸಮಬಲ ಕಂಡಿತು. ಪಂಜಾಬ್ ಪರ ಸುಖ್ವಿಂದರ್ ಸಿಂಗ್ (5ನೇ ನಿಮಿಷ), ಜರ್ಮನ್ ಸಿಂಗ್ (33ನೇ), ಮತ್ತು ಜೋಬನ್‌ಪ್ರೀತ್ ಸಿಂಗ್ (39ನೇ) ಗೋಲು ಗಳಿಸಿದರೆ, ಉತ್ತರ ಪ್ರದೇಶದ ಪರ ಅಜಿತ್ ಯಾದವ್ (31ನೇ), ಸೂರಜ್ ಪಾಲ್ (48ನೇ) ), ಮತ್ತು ಆಕಾಶ್ ಪಾಲ್ (54ನೇ) ಚೆಂಡನ್ನು ಗುರಿ ಸೇರಿಸಿದರು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 4–3ರಿಂದ ಪಂಜಾಬ್ ಮೇಲುಗೈ ಸಾಧಿಸಿತು.