ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಕ್ವೆಸ್ಟ್ರಿಯನ್: ಭಾರತದ ಶ್ರುತಿ ಚಾರಿತ್ರಿಕ ಸಾಧನೆ

Published 13 ಜೂನ್ 2024, 16:00 IST
Last Updated 13 ಜೂನ್ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಈಕ್ವೆಸ್ಟ್ರಿಯನ್ ಕ್ರೀಡಾಪಟು ಶ್ರುತಿ ವೋರಾ ಅವರು ತ್ರೀಸ್ಟಾರ್ ಗ್ರ್ಯಾನ್‌ ಪ್ರಿ ರೇಸ್ ಗೆದ್ದರು. ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಆಶ್ವಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಂದು ಭಾರತ ಈಕ್ವೆಸ್ಟ್ರಿಯನ್ ಫೆಡರೇಷನ್ (ಇಎಫ್ಐ) ತಿಳಿಸಿದೆ. 

ಸ್ಲೋವಿನಿಯಾದ ಲಿಪಿಕಾದಲ್ಲಿ ಜೂನ್ 7 ರಿಂದ 9ರವರೆಗೆ ನಡೆದ  ಸಿಡಿಐ –3 ಸ್ಪರ್ಧಾ ವಿಭಾಗದಲ್ಲಿ ಶ್ರುತಿ 67.761 ಪಾಯಿಂಟ್ಸ್  ಗಳಿಸಿದರು. 

ಮಾಲ್ಡೋವಾದ ತತಿಯಾನಾ ಆ್ಯಂಟೋನೆಂಕೊ (ಆಚೆನ್) 66.522 ಪಾಯಿಂಟ್ಸ್, ಆಸ್ಟ್ರೀಯಾದ ಜೂಲಿಯನ್ ಜೆರಿಚ್ (ಕ್ವಾರ್ಟರ್‌ ಗರ್ಲ್) 66.087 ಅಂಕ ಗಳಿಸಿದರು. 

ಗ್ರ್ಯಾನ್‌ಪ್ರಿ ಸ್ಪೆಷಲ್ ವಿಭಾಗದಲ್ಲಿಯೂ ಶ್ರುತಿ ಗಮನ ಸೆಳೆಯುವ ಸಾಮರ್ಥ್ಯ ಪ್ರದರ್ಶನ ನೀಡಿದರು. 66.085 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. 

‘ಈ ಫಲಿತಾಂಶದಿಂದ ಅಪಾರ ಸಂತಸವಾಗಿದೆ. ಈ ಸಾಧನೆಗಾಗಿ ಹಲವು ದಿನಗಳಿಂದ ಬಹಳ ಕಠಿಣ ಪರಿಶ್ರಮಪಟ್ಟಿದ್ದೇನೆ. ಸಾಧನೆ ತೃಪ್ತಿ ತಂದಿದೆ. ಒಲಿಂಪಿಕ್ ವರ್ಷದಲ್ಲಿ ಈ ಸಾಧನೆ ಮಾಡಿರುವುದು ಹೊಸ ಭರವಸೆ ಮೂಡಿಸಿದೆ’ ಎಂದು ಶ್ರುತಿ ಇಎಫ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರುತಿ ಅವರು ಮೂಲತಃ ಕೋಲ್ಕತ್ತದವರು.  ಡ್ರೆಸೆಜ್ ವಿಶ್ವ ಚಾಂಪಿಯನ್‌ಷಿಪ್ (2022)ಮತ್ತು ಏಷ್ಯನ್ ಗೇಮ್ಸ್ (2010, 2014) ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT