ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಡಿ ಸೋತ ಸಿಂಧು

ಸ್ಪೇನ್‌ ಮಾಸ್ಟರ್ಸ್‌: ಭಾರತದ ದಂಪತಿ ಮುನ್ನಡೆ
Published 29 ಮಾರ್ಚ್ 2024, 16:03 IST
Last Updated 29 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಪಿ.ವಿ. ಸಿಂಧು ವಿರೋಚಿತ ಆಟ ಪ್ರದರ್ಶಿಸಿದರೂ, ಮ್ಯಾಡ್ರಿಡ್‌ ಸ್ಪೇನ್ ಮಾಸ್ಟರ್ಸ್‌ ಸೂಪರ್ 300 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಥಾಯ್ಲೆಂಡ್‌ ಆಟಗಾರ್ತಿ ಸುಪಾನಿದಾ ಕಟೆಥಾಂಗ್ ಎದುರು ಸೋಲನುಭವಿಸಬೇಕಾಯಿತು.

ಕಳೆದ ವರ್ಷ ರನ್ನರ್ ಆಗಿದ್ದ ಸಿಂಧು, ತೀವ್ರ ಹೋರಾಟದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ 4–8 ಹಿನ್ನಡೆಯಿಂದ ಚೇತರಿಸಿ ಗೆದ್ದರೂ ನಂತರ ಅದೇ ಮೇಲುಗೈ ಕಾಪಾಡಿಕೊಳ್ಳಲು ಆಗಲಿಲ್ಲ. ಆರನೇ ಶ್ರೇಯಾಂಕದ ಸುಪಾನಿದಾ 24–26, 21–17, 22–20ರಲ್ಲಿ ಜಯಗಳಿಸಿದರು.

ಆದರೆ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ದಂಪತಿಯಾದ ಎನ್‌.ಸಿಕ್ಕಿ ರೆಡ್ಡಿ ಮತ್ತು ಬಿ.ಸುಮೀತ್ ರೆಡ್ಡಿ 14–21, 21–11, 21–17ರಲ್ಲಿ ನಾಲ್ಕನೇ ಶ್ರೇಯಾಂಕದ ರೆಹಾನ್ ನೌಫಾಲ್‌ ಕುಶರ್ಜಂಟೊ– ಲಿಸಾ ಆಯು ಕುಸುಮಾವತಿ (ಇಂಡೊನೇಷ್ಯಾ) ಜೋಡಿಯನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದರು.

ಮೂರನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಜೋಡಿ ಮಹಿಳಾ ಡಬಲ್ಸ್‌ನಲ್ಲಿ 13–21, 19–21ರಲ್ಲಿ ಆರನೇ ಶ್ರೇಯಾಂಕದ ಲೀ ಚಿಯಾ ಹಸಿನ್– ತೆಂಗ್‌ ಚುನ್‌ ಸುನ್ (ಚೀನಾ ತೈಪಿ) ಜೋಡಿಗೆ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT