ಮಂಡ್ಯ: ಕರ್ನಾಟಕ ತಂಡವು ಮೊದಲ ದಕ್ಷಿಣ ವಲಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ನಗರದ ಪಿಇಟಿ ಅಕ್ವೆಟಿಕ್ ಸೆಂಟರ್‌ನಲ್ಲಿ ಸ್ಪರ್ಧೆಯ ಕೊನೆಯ ದಿನವಾದ ಭಾನುವಾರವೂ ರಾಜ್ಯದ ಈಜುಪಟುಗಳು ಪಾರಮ್ಯ ಮೆರೆದರು.
ಕರ್ನಾಟಕದ ಹರಿಕಾರ್ತಿಕ್ ವೇಲು ಮತ್ತು ಶ್ರುತಿ ಕೆ.ಆರ್. ಅವರು ಮೊದಲ ದಕ್ಷಿಣ ವಲಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 50 ಮೀ ಫ್ರೀಸ್ಟೈಲ್‌ನಲ್ಲಿ (ಗುಂಪು 1) ಪ್ರಶಸ್ತಿ ಗೆದ್ದುಕೊಂಡರು.
ಒಂದನೇ ಗುಂಪಿನ 50 ಮೀ ಬ್ಯಾಕ್‌ಸ್ಟ್ರೋಕ್‌ನ ಬಾಲಕರ ವಿಭಾಗದಲ್ಲಿ ಕುಶಾಲ್ ಕೆ ಮತ್ತು ಬಾಲಕಿಯರ ವಿಭಾಗದಲ್ಲಿ ಸಿದ್ಧಿ ಜಿ. ಶಾ ಅಗ್ರಸ್ಥಾನಿಯಾದರು. 100 ಮೀಟರ್ ಬಟರ್‌ಫೈ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಅನೀಶ್ ಅನಿರುದ್ಧ ಕೋರೆ ಮತ್ತು ಬಾಲಕಿಯರ ವಿಭಾಗದಲ್ಲಿ ರಿಶಿಕಾ ಯು. ಮಂಗಲ್ ಮೊದಲಿಗರಾದರು.
ಕರ್ನಾಟಕ ತಂಡವು 1905 ಪಾಯಿಂಟ್‌ನೊಂದಿಗೆ ಅಗ್ರಸ್ಥಾನ ಪಡೆದರೆ, ತಮಿಳುನಾಡು ತಂಡ (522 ಅಂಕ) ಎರಡನೇ ಸ್ಥಾನ ಪಡೆಯಿತು. ಕೇರಳ (313), ತೆಲಂಗಾಣ (288) ಮತ್ತು ಆಂಧ್ರಪ್ರದೇಶ (109) ನಂತರದ ಸ್ಥಾನ ಪಡೆದವು.
ಚಿನ್ನ ಗೆದ್ದ ಕರ್ನಾಟಕದ ಈಜುಪಟುಗಳು:
ಬಾಲಕರು: 1ನೇ ಗುಂಪು: 50 ಮೀ. ಫ್ರೀಸ್ಟೈಲ್: ಹರಿಕಾರ್ತಿಕ್ ವೇಲು, ಕಾಲ; 24.94ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್: ಕುಶಾಲ್ ಕೆ., ಕಾಲ: 27.45ಸೆ.; 100 ಮೀ. ಬಟರ್‌ಫೈ: ಅನೀಶ್ ಅನಿರುದ್ಧ ಕೋರೆ, ಕಾಲ: 59.02 ಸೆ.; 200 ಮೀ. ಬ್ರೆಸ್ಟ್ ಸ್ಟ್ರೋಕ್: ಆಯುಷ್ ಶಿವರಾಜು ಎಂ. ಕಾಲ: 2 ನಿ.26.78 ಸೆ.; 200 ಮೀ. ಮಿಡ್ಲೆ: ಸೂರ್ಯ ಜೆ.ಟಿ. ಕಾಲ: 2ನಿ.11.51ಸೆ; 1500 ಮೀ. ಫ್ರೀಸ್ಟೈಲ್: ಅಂಕಿತ್ ಭಟ್ ಆರ್ನಡಿ, ಕಾಲ: 16 ನಿ.29.36ಸೆ; 4x200 ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 8ನಿ.11.37ಸೆ. ಎರಡನೇ ಗುಂಪು: 50 ಮೀ. ಫ್ರೀಸ್ಟೈಲ್: ದಕ್ಷಿತ್ ಎಂ. ಕಾಲ: 26.85 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್: ಭವ್ಯೇಶ್ ಸಾಯಿ ಚೌಧರಿ, ಕಾಲ: 30.14 ಸೆ.; 100 ಮೀ. ಬಟರ್‌ಫೈ: ಅಮೋಘ್ ಎಸ್.ಎಂ, ಕಾಲ 1 ನಿ.02.45ಸೆ.: 200 ಮೀ. ಬ್ರೆಸ್ಟ್ ಸ್ಟ್ರೋಕ್: ರಿಯಾಂಶ್ ಕಾಂತಿ ವೈ, ಕಾಲ: 2ನಿ.39.99ಸೆ.; 200 ಮೀ. ಮಿಡ್ಲೆ: ಅಮೋಘ್ ಎಸ್.ಎಂ, ಕಾಲ: 2ನಿ.21.57ಸೆ.; 1500 ಮೀ. ಫ್ರೀಸ್ಟೈಲ್: ದಕ್ಷ್ ಪ್ರಸಾದ್, ಕಾಲ: 17 ನಿ.49.81ಸೆ. 4x200 ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 8ನಿ.55.19ಸೆ. ಮೂರನೇ ಗುಂಪು: 50 ಮೀ. ಫ್ರೀಸ್ಟೈಲ್: ಆರಿತ್ ಚಂದ್ರಶೇಖರ್, ಕಾಲ: 31.15ಸೆ, 50 ಮೀ. ಬ್ಯಾಕ್‌ಸ್ಟ್ರೋಕ್: ಆರಿತ್ ಚಂದ್ರಶೇಖರ್, ಕಾಲ: 34.76ಸೆ, 100 ಮೀ. ಬಟರ್‌ಫೈ: 200 ಮೀ. ಮಿಡ್ಲೆ; ಸ್ನಿಥಿಕ್ ಎನ್, ಕಾಲ: 2ನಿ.54.05ಸೆ.
ಬಾಲಕಿಯರು:
1ನೇ ಗುಂಪು: 50 ಮೀ. ಫ್ರೀಸ್ಟೈಲ್: ಶ್ರುತಿ ಕೆ.ಆರ್, ಕಾಲ: 28.35 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್: ಸಿದ್ಧಿ ಜಿ. ಶಾ (30.94ಸೆ), 100 ಮೀ. ಬಟರ್‌ಫೈ: ರಿಶಿಕಾ ಯು. ಮಂಗಲ್, ಕಾಲ: 1ನಿ.06.51ಸೆ, 200 ಮೀ. ಬ್ರೆಸ್ಟ್ ಸ್ಟ್ರೋಕ್: ಸಮನ್ವಿ ಇ.ಎಸ್, ಕಾಲ: 2ನಿ.53.48ಸೆ, 200 ಮೀ. ಮಿಡ್ಲೆ: ಅಂಶು ಆನಂದ್ ದೇಶಪಾಂಡೆ, ಕಾಲ: 2ನಿ.32.73ಸೆ.; 1500 ಮೀ. ಫ್ರೀಸ್ಟೈಲ್: ಜನ್ಯಾ ಬಿ.ಎಸ್, ಕಾಲ: 18ನಿ.43.27ಸೆ.; 4x200 ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 10ನಿ.04.16ಸೆ. 2ನೇ ಗುಂಪು: 50 ಮೀ. ಫ್ರೀಸ್ಟೈಲ್: ಸೋನಾಕ್ಷಿ ಸತ್ಯನಾರಾಯಣ, ಕಾಲ: 29.47ಸೆ, 100 ಮೀ. ಬಟರ್‌ಫೈ: ಸೋನಾಕ್ಷಿ ಸತ್ಯನಾರಾಯಣ, ಕಾಲ: 1ನಿ.09.78ಸೆ.; 200 ಮೀ. ಬ್ರೆಸ್ಟ್ ಸ್ಟ್ರೋಕ್: ಗಗನಾ ಸಿ.ಎಂ, ಕಾಲ: 2ನಿ.55.19ಸೆ.; 200 ಮೀ. ಮಿಡ್ಲೆ: ಸುಮನ್ವಿ ವಿ. ಕಾಲ: 2ನಿ.39.12ಸೆ.; 1500 ಮೀ. ಫ್ರೀಸ್ಟೈಲ್: ಸಂಜನಾ ಪಿ.ವಿ, ಕಾಲ: 18ನಿ.48.57ಸೆ.; 4x200 ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 9ನಿ.39.13ಸೆ. ಮೂರನೇ ಗುಂಪು: 50 ಮೀ. ಫ್ರೀಸ್ಟೈಲ್:ಸ್ಮೃತಿ ಮಹೇಶ್, ಕಾಲ: 33.07ಸೆ, 50 ಮೀ. ಬ್ಯಾಕ್‌ಸ್ಟ್ರೋಕ್: ಧೃತಿ ಎಸ್.ವಶಿಷ್ಠ, ಕಾಲ: 37.66 ಸೆ,; 100 ಮೀ. ಬಟರ್‌ಫೈ: ಸ್ಮೃತಿ ಮಹೇಶ್, ಕಾಲ: 1ನಿ.24.23ಸೆ,; 200 ಮೀ. ಮಿಡ್ಲೆ; ಜೋಷ್ಣಾ ಸಿಸೋಡಿಯಾ, ಕಾಲ: 2ನಿ.59.18ಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.