ಬೆಂಗಳೂರು: ಯಂಗ್ ಓರಿಯನ್ಸ್ ಎಸ್.ಸಿ ತಂಡವು ಭಾನುವಾರ ಇಲ್ಲಿಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ.ಎನ್.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ನ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ್ ಎಸ್.ಯು. ತಂಡವನ್ನು 113–65ರಿಂದ ಮಣಿಸಿತು.
ಇತರ ಪಂದ್ಯಗಳಲ್ಲಿ ಬ್ಯಾಂಕ್ ಆಫ್ ಬರೋಡ ತಂಡವು ಐಬಿಬಿಸಿ ತಂಡವನ್ನು 78–48ರಿಂದ, ಜಿಎಸ್‌ಟಿ ಅಂಡ್ ಕಸ್ಟಮ್ಸ್ ತಂಡವು ಬಿಎಸ್‌ಎನ್ಎಲ್ ತಂಡವನ್ನು 85– 56ರಿಂದ ಮತ್ತು ಎಸ್. ಬ್ಲೂಸ್ ತಂಡವು ಎಂಎನ್‌ಕೆ ರಾವ್ ಪಾರ್ಕ್ ಬಿಸಿ ತಂಡವನ್ನು 76–63ರಿಂದ ಸೋಲಿಸಿತು.