ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಂಎನ್‌ಕೆ ತಂಡಕ್ಕೆ ಗೆಲುವು

Published 16 ಏಪ್ರಿಲ್ 2024, 15:29 IST
Last Updated 16 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ಧಾರ್ಥ್‌ ರಾವ್‌ (13) ಮತ್ತು ವಿಜಯೇಂದ್ರ (12) ಅವರ ಆಟದ ಬಲದಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ಬಾಲಕರ ತಂಡವು ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ 81–62ರಿಂದ ಇನ್‌ಸ್ಪೈರ್‌ ಬಿ.ಸಿ ಧಾರವಾಡ ತಂಡವನ್ನು ಮಣಿಸಿತು. 

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 41–19ರಿಂದ ಮುನ್ನಡೆ ಪಡೆದ ಎಂಎನ್‌ಕೆ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. ಇನ್‌ಸ್ಪೈರ್‌ ತಂಡದ ರಾಹುಲ್‌ ಮತ್ತು ಪ್ರಶಾಂತ್‌ ಕ್ರಮವಾಗಿ 18 ಮತ್ತು 14 ಪಾಯಿಂಟ್ಸ್‌ ಗಳಿಸಿದರು.

ಮಲ್ಲಸಜ್ಜನ ಬಿ.ಸಿ ಧಾರವಾಡ ತಂಡವು 44–34ರಿಂದ ಸ್ಪಾರ್ಟನ್ ಬಿ.ಸಿ ನಂಜನಗೂಡು ತಂಡವನ್ನು ಸೋಲಿಸಿತು. ಮಲ್ಲಸಜ್ಜನ ತಂಡದ ಪರ ಶಶಾಂಕ್‌ 20 ಅಂಕ ಗಳಿಸಿದರು.

ಇತರ ಫಲಿತಾಂಶ: ಬಾಲಕರು: ಡಿವೈಇಎಸ್‌ ಬೆಂಗಳೂರು 69–31ರಿಂದ ಕನ್ನೆ ಗೌಡ ಬಿ.ಸಿ ಮೈಸೂರು ತಂಡವನ್ನು; ಬಳ್ಳಾರಿ ತಂಡ 30–26ರಿಂದ ಹಾಸನ ತಂಡವನ್ನು; ಬೀಗಲ್ಸ್‌ ಬಿ.ಸಿ 51–11ರಿಂದ ಯಂಗ್‌ ಬುಲ್ಸ್‌ ಬಿ.ಸಿ. ತಂಡವನ್ನು; ಆಲ್‌ ಸ್ಟಾರ್ ಅಕಾಡೆಮಿ ಬಿ.ಸಿ ಮೈಸೂರು 66–31ರಿಂದ ಕನಕ ಬಿ.ಸಿ ಕೋಲಾರ ತಂಡವನ್ನು; ಚಿಕ್ಕಮಗಳೂರು ಬಿ.ಸಿ 55–19ರಿಂದ ವೈಎಫ್‌ಬಿಸಿ ಕೋಲಾರ ತಂಡವನ್ನು ಸೋಲಿಸಿದವು.

ಬಾಲಕಿಯರು: ಮಂಗಳೂರು ಬಿ.ಸಿ 49–39ರಿಂದ ದಾವಣಗೆರೆ ಬಿ.ಸಿ ತಂಡವನ್ನು; ವಿವೇಕ್ಸ್‌ ಎಸ್‌.ಸಿ 44–40ರಿಂದ ದೇವಾಂಗ ಯೂನಿಯನ್‌ ತಂಡವನ್ನು; ಭಾರತ್‌ ಎಸ್‌.ಯು 44–40ರಿಂದ ಕೋಲಾರ ತಂಡವನ್ನು; ಬೆಂಗಳೂರು ಸ್ಪೋರ್ಟಿಂಗ್‌ 30–23ರಿಂದ ಮಲ್ಲಸಜ್ಜನ ಬಿ.ಸಿ ಧಾರವಾಡ ತಂಡವನ್ನು ಮಣಿಸಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT