ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ಸುದರ್ಶನ್‌, ಯುಕ್ತಾ ಚಾಂಪಿಯನ್‌

Published 28 ಜುಲೈ 2023, 16:52 IST
Last Updated 28 ಜುಲೈ 2023, 16:52 IST
ಅಕ್ಷರ ಗಾತ್ರ

ಬೆಂಗಳೂರು: ಸುದರ್ಶನ್‌ ಎ. ರಾಜ್‌ ಮತ್ತು ಯುಕ್ತಾ ಹರ್ಷ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 11 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸುದರ್ಶನ್‌ ಎ. ರಾಜ್‌ 11-9, 5-11, 11-7, 11-5 ರಿಂದ ಅಂಕುಶ್‌ ಬಾಳಿಗ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ಸುದರ್ಶನ್‌ ಅವರು ಎಂ.ಸಿದ್ಧಾಂತ್‌ ಅವರನ್ನು, ಅಂಕುಶ್‌ ಬಾಳಿಗ ಅವರು ಎಂ.ಸಾತ್ವಿಕ್‌ ಅವರನ್ನು ಸೋಲಿಸಿದ್ದರು.

ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಯುಕ್ತಾ ಹರ್ಷ 11- 6, 11- 3, 11- 6 ರಿಂದ ಕ್ರಿಶಾ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಯುಕ್ತಾ ಅವರು ರಚಿತಾ ಅವರನ್ನು, ಕ್ರಿಶಾ ಅವರು ಸಾಕ್ಷ್ಯಾ ಸಂತೋಷ್‌ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT