ಬೆಂಗಳೂರು: ಮೊಹಾಲಿಯ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ಬಿಹಾರದ ವಿದ್ಯಾಚಲ ಇಂಟರ್ ನ್ಯಾಷನಲ್ ಸ್ಕೂಲ್ ತಂಡಗಳು 64ನೇ ಸುಬ್ರತೊ ಕಪ್ ಸಬ್ ಜೂನಿಯರ್ ಬಾಲಕರ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದವು.

ಮಂಗಳವಾರ ಬೆಳಿಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಿನರ್ವಾ ತಂಡವು 6–1ರಿಂದ ಜಾರ್ಖಂಡ್ನ ಸೇಂಟ್ ಜಾನ್ ಸ್ಕೂಲ್ ತಂಡವನ್ನು ಸುಲಭವಾಗಿ ಮಣಿಸಿತು. ಸಂಜೆ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದ್ಯಾಚಲ ತಂಡವು 4–1ರಿಂದ ಮಧ್ಯಪ್ರದೇಶದ ರಿವರ್ಸೈಡ್ ನ್ಯಾಚುರಲ್ ಸ್ಕೂಲ್ ತಂಡದ ಎದುರು ಜಯ ಸಾಧಿಸಿತು.

ಫೈನಲ್ ಪಂದ್ಯವು ಯಲಹಂಕದ ವಾಯುನೆಲೆಯಲ್ಲಿ ಗುರುವಾರ (ಸೆಪ್ಟೆಂಬರ್ 11) ನಡೆಯಲಿದೆ. ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.