ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌: ದಾಖಲೆ ಬರೆದ ಸಮನ್ವಿ, ಶರಣ್

ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌: ಮಾನ್ಯ ವಾಧ್ವ, ನೈಶಾ ಶೆಟ್ಟಿಗೆ ಎರಡು ಚಿನ್ನ
Published 9 ಡಿಸೆಂಬರ್ 2023, 16:16 IST
Last Updated 9 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಉಡುಪಿ: ಮೊದಲ ದಿನ ತಲಾ ಎರಡು ಚಿನ್ನ ಗೆದ್ದು ಸಂಭ್ರಮಿಸಿದ್ದ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ (ಬಿಎಸಿ) ಸಮನ್ವಿ ಇ.ಎಸ್‌ ಮತ್ತು ಪಿಎಂ ಈಜುಕೇಂದ್ರದ ಶರಣ್‌ ಎಸ್. ಅವರು ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ 3ನೇ ದಿನ ದಾಖಲೆಯೊಂದಿಗೆ ಮಿಂಚಿದರು.

ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಅಜ್ಜರಕಾಡು ಈಜುಕೊಳದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಗುಂಪು–1, ಮಹಿಳೆಯರ 200 ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಸಮನ್ವಿ ಮತ್ತು ಗುಂಪು–2, ಬಾಲಕರ 800 ಮೀ ಫ್ರೀಸ್ಟೈಲ್‌ನಲ್ಲಿ ಶರಣ್ ಕ್ರಮವಾಗಿ 2019 ಮತ್ತು 2014ರ ದಾಖಲೆಗಳನ್ನು ಶನಿವಾರ ಮುರಿದರು. 

3ನೇ ದಿನದ ಫಲಿತಾಂಶಗಳು:

ಬಾಲಕರು ಗುಂಪು–1: 50 ಮೀ ಬಟರ್‌ಫ್ಲೈ: ಚಿಂತನ್ ಬಿ.ಶೆಟ್ಟಿ (ಮಂಗಳಾ ಸ್ವಿಮ್ಮಿಂಗ್‌ ಕ್ಲಬ್‌)–1, ಸ್ವರೂಪ್ ಧನುಚೆ (ಬಿಎಸಿ)–2, ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ (ಡಾಲ್ಫಿನ್ ಅಕ್ವಾಟಿಕ್ಸ್‌)–3. ಕಾಲ: 26.29;

ಬಾಲಕಿಯರು: ನೈಶಾ ಶೆಟ್ಟಿ (ಡಾಲ್ಫಿನ್‌ ಅಕ್ವಾಟಿಕ್ಸ್‌)–1, ಇಂಚರ ಫಣೀಂದ್ರನಾಥ್‌ (ಎಲೀಟ್ ಸ್ಪೋರ್ಟ್ಸ್‌ ಅಕಾಡೆಮಿ)–2, ಹಿತೈಷಿ ವಿ. (ವಿಜಯನಗರ ಈಜುಕೇಂದ್ರ)–3. ಕಾಲ: 29.86;

100 ಮೀ ಬ್ಯಾಕ್‌ಸ್ಟ್ರೋಕ್‌: ಮಹಿಳೆಯರು: ನೈಶಾ ಶೆಟ್ಟಿ–1, ಸಿದ್ಧಿ ಜಿ.ಶಾ–2 (ಇಬ್ಬರೂ ಡಾಲ್ಫಿನ್ ಅಕ್ವಾಟಿಕ್ಸ್‌), ಶ್ರುತಿ ಕೆ.ಆರ್‌ (ಗ್ಲೋಬಲ್ ಈಜುಕೇಂದ್ರ)–3. ಕಾಲ: 1:08.79;

ಬಾಲಕರು: ಕುಶಾಲ್‌ ಕೆ–1, ಸೂರ್ಯ ಜೆ.ಟಿ.–2 (ಇಬ್ಬರೂ ಬಿಎಸಿ), ರಾಘವ್ ಸ್ವಚ್ಛಂದಂ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಕಾಲ: 59.07; 200 ಮೀ ಬ್ರೆಸ್ಟ್‌ ಸ್ಟ್ರೋಕ್‌: ಬಾಲಕರು: ಸೂರ್ಯ ಜೋಯಪ್ಪ–1, ಶ್ರೇಯಸ್ ಮಂಜುನಾಥ್‌–2 (ಇಬ್ಬರೂ ಬಿಎಸಿ), ಸುಯೋಗ್ ಗೌಡ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಕಾಲ: 2:25.80;

ಬಾಲಕಿಯರು: ಸಮನ್ವಿ ಎ.ಎಸ್‌ (ಬಿಎಸಿ)–1, ಹಿತೈಷಿ ವಿ (ವಿಜಯನಗರ ಈಜುಕೇಂದ್ರ)–2, ಆರಾಧನಾ ಎಸ್‌.ಗೌಡ (ಡಾಲ್ಫಿನ್ ಅಕ್ವಾಟಿಕ್ಸ್‌)–3. ಕಾಲ: 2:47.34 (ಕೂಟ ದಾಖಲೆ: ಹಿಂದಿನ ದಾಖಲೆ: ಗುಣ್ ಮಟ್ಟ: 2:47.46, ಬಿಎಸಿ–2019);

800 ಮೀ ಫ್ರೀಸ್ಟೈಲ್‌: ಬಾಲಕರು: ರೇಣುಕಾಚಾರ್ಯ ಹೊಡಮನಿ–1, ಯಜತ್ ಅಯ್ಯಪ್ಪ–2, ಸಾಹಿಲ್ ದಲಾಲ–3 (ಮೂವರೂ ಬಿಎಸಿ). ಕಾಲ 8:42.43ಸೆ;

ಮಹಿಳೆಯರು: ಜನ್ಯಾ ಬಿ.ಎಸ್‌–1, ಆಸರ ಸುಧಿರ್‌–2 (ಇಬ್ಬರೂ ಬಿಎಸಿ), ಋಷಿಕಾ ಎಂ.ವಿ. (ಎಲೀಟ್‌ ಸ್ಪೋರ್ಟ್ಸ್‌ ಅಕಾಡೆಮಿ)–3. ಕಾಲ: 9:46.97; 4x50 ಮೀ ಫ್ರೀ ಸ್ಟೈಲ್‌:ಡಾಲ್ಫಿನ್ ಈಜು ಕೇಂದ್ರ–1, ಬಿಎಸಿ ‘ಎ’–2, ಬಿಎಸಿ ‘ಬಿ’–3. ಕಾಲ: 1:57.58.

ಗುಂಪು–2: 50 ಮೀ ಬಟರ್‌ಫ್ಲೈ:

ಬಾಲಕರು: ಅನೀಶ್ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಈಜುಕೇಂದ್ರ)–1, ದಕ್ಷ್‌ ಮಟ್ಟ–2, ವಫಿ ಅಬ್ದುಲ್ ಹಕೀಂ–3 (ಇಬ್ಬರೂ ಬಿಎಸಿ). ಕಾಲ: 27.47;

ಬಾಲಕಿಯರು: ಚರಿತಾ ಫಣೀಂದ್ರನಾಥ್‌ (ಎಲೀಟ್‌ ಸ್ಪೋರ್ಟ್ಸ್‌ ಅಕಾಡೆಮಿ)–1, ತಿಸ್ಯಾ ಸೊನಾರ್ (ಪಿಎಂ ಈಜು ಕೇಂದ್ರ)–2, ಅಂಜಲಿ ಹೊಸಕೆರೆ (ಬಿಎಸಿ)–3. ಕಾಲ: 29.94

200 ಮೀ ಬ್ರೆಸ್ಟ್‌ ಸ್ಟ್ರೋಕ್‌: ಡ್ಯಾನಿಯಲ್ ಪಾಲ್–1, ಯಶ್ ಎಚ್‌.ಪಾಲ್‌–2 (ಇಬ್ಬರೂ ಬಿಎಸಿ), ಸಾಯೀಶ್ ಕಿಣಿ (ಗ್ಲೋಬಲ್ ಈಜುಕೇಂದ್ರ)–3. ಕಾಲ: 2:33.78;

ಬಾಲಕಿಯರು: ಹಿಯಾ ಎಂ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಗಗನಾ ಸಿ.ಎಂ. (ಗ್ಲೋಬಲ್ ಈಜು ಕೇಂದ್ರ)–2, ಕೌಶಿಕಾ ಆರ್‌ (ಬಿಎಸಿ)–3. ಕಾಲ: 2:50.90;

100 ಮೀ ಬ್ಯಾಕ್‌ಸ್ಟ್ರೋಕ್‌: ಬಾಲಕರು: ಅಭಿಮನ್ಯು ನಂಬಿಯಾರ್ (ಡಾಲ್ಫಿನ್‌ ಅಕ್ವಾಟಿಕ್ಸ್‌)–1, ಸಮರ್ಥ್ ಗೌಡ ಬಿ.ಎಸ್‌–2, ಇಶಾನ್ ಆರ್ಯ–3 (ಇಬ್ಬರೂ ಬಿಎಸಿ). ಕಾಲ: 1:03.31;

ಬಾಲಕಿಯರು: ತನ್ಯಾ ಎಂ.ಎನ್‌ (ಬಿಎಸಿ)–1, ವೇದಾ ಖಾನೋಳ್ಕರ್‌ (ಅಬಾ ಕ್ಲಬ್‌)–2, ತನ್ಮಯಿ ಧರ್ಮೇಶ್‌ (ಗ್ಲೋಬಲ್ ಈಜುಕೇಂದ್ರ)–3. ಕಾಲ: 1:08.49;

800 ಮೀ ಫ್ರೀಸ್ಟೈಲ್‌: ಬಾಲಕರು: ಶರಣ್‌ ಎಸ್‌ (ಪಿಎಂಎಸ್‌ಸಿ)–1, ಧ್ರುಪದ್ ರಾಮಕೃಷ್ಣ (ಬಿಎಸಿ)–2, ಅನೀಶ್‌ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಕಾಲ: 8:47.05 (ಕೂಟ ದಾಖಲೆ: ಹಿಂದಿನ ದಾಖಲೆ: ಬಿಎಸಿಯ ಎಸ್‌.ಶಿವ: 8:47.15; 2014);

ಬಾಲಕಿಯರು: ತನಿಶಾ ವಿನಯ್‌ (ಬಿಎಸಿ)–1, ಹಿತಶ್ರೀ ಎನ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ಪ್ರತೀಕ್ಷಾ ಎನ್‌.ಗೌಡ (ಡಿಕೆವಿ ಈಜುಕೇಂದ್ರ)–3. ಕಾಲ: 10:01.59;

4x50 ಮೀ ಫ್ರೀಸ್ಟೈಲ್‌: ಬಾಲಕಿಯರು: ನೆಟ್ಟಕಲ್ಲಪ್ಪ ಈಜು ಕೇಂದ್ರ–1, ಪಿಎಂ ಈಜುಕೇಂದ್ರ–2, ಬಿಎಸಿ ‘ಎ’–3; ಕಾಲ: 2:00.89.

ಗುಂಪು–3: 25 ಮೀ ಫ್ರೀಸ್ಟೈಲ್‌: ಬಾಲಕರು: ನಿಖಿಲ್ ತೇಜ್ ರೆಡ್ಡಿ (ಬಿಎಸಿ)–1, ರೋನಿತ್ ಅರುಣ್ ಕುಮಾರ್ (ಬೆಂಗಳೂರು ಸ್ವಿಮ್ಮಿಂಗ್‌ ಅಕಾಡೆಮಿ)–2, ಹವಿಶ್‌ ಆರ್‌ (ವಿಜಯನಗರ ಈಜು ಕೇಂದ್ರ)–3. ಕಾಲ: 14.00;

ಬಾಲಕಿಯರು: ಮಾನ್ಯ ಆರ್‌.ವಾಧ್ವ (ಪಿಎಂಎಸ್‌ಸಿ)–1, ಹಂಸಿಕಾ ಪಿ.ರೆಡ್ಡಿ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ಶ್ರೇಯಾ ಸುರೇಶ್ ಪೂಜಾರ್‌ (ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ)–3. ಕಾಲ: 14.83;

50 ಮೀ ಬಟರ್‌ಫ್ಲೈ: ಬಾಲಕರು: ರೋನಿತ್ ಅರುಣ್ ಕುಮಾರ್ (ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ)–1, ವ್ಯಾಸ್ ವಿಜಯ್‌ (ಡಿಕೆವಿ ಈಜುಕೇಂದ್ರ)–2, ಸರ್ವೇಶ್ ರಾಜ್‌ (ಬಿಎಸಿ)–3. ಕಾಲ:33.01;

ಬಾಲಕಿಯರು: ಮಾನ್ಯ ಆರ್‌.ವಾಧ್ವ (ಪಿಎಂ ಈಜುಕೇಂದ್ರ)–1, ಶ್ವಿತಿ ದಿವಾಕರ್ ಸುವರ್ಣ (ಡಾಲ್ಫಿನ್‌ ಅಕ್ವಾಟಿಕ್ಸ್‌)–2, ರಿಶ್ಮಿಕಾ ಆರ್‌ (ಬಿಎಸಿ)–3. ಕಾಲ: 33.18;

100 ಮೀ ಬ್ಯಾಕ್‌ಸ್ಟ್ರೋಕ್‌; ಬಾಲಕರು: ಲೋಹಿತಾಶ್ವ ನಾಗೇಶ್‌ (ಡಿಕೆವಿ ಈಜುಕೇಂದ್ರ)–1, ನಿಖಿಲ್ ತೇಜ್ ರೆಡ್ಡಿ (ಬಿಎಸಿ)–2, ಹವಿಶ್ ಆರ್‌. (ವಿಜಯನಗರ ಈಜು ಕೇಂದ್ರ)–3. ಕಾಲ: 1:16.62;

ಬಾಲಕಿಯರು: ಸುಮನ್ವಿ ವಿ–1, ಸುಮೇಧಾ ವಿ–2, ಅವ್ಹನಿ ಬೆಳ್ಳಿಯಪ್ಪ–3 (ಮೂವರೂ ಡಿಕೆವಿ ಈಜುಕೇಂದ್ರ). ಕಾಲ: 1:15.57;

4x50 ಮೀ ಪ್ರೀಸ್ಟೈಲ್‌: ಬಾಲಕಿಯರು: ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ–1. ಡಿಕೆವಿ ಈಜು ಕೇಂದ್ರ–2, ಬಿಎಸಿ–3. ಕಾಲ: 2:08.93.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT