ಟೋಕಿಯೊ: ಮೊದಲ ಸುತ್ತಿನಲ್ಲಿ ಉತ್ತರ ಆರಂಭ ಮಾಡಿದ್ದ ಭಾರತದ ಗಾಲ್ಫ್ ಆಟಗಾರ ಅನಿರ್ಬನ್ ಲಾಹಿರಿ ಎರಡನೇ ಸುತ್ತಿನಲ್ಲಿ ಹಿಂದೆ ಬಿದ್ದರು. ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಅಂತ್ಯಕ್ಕೆ ಅವರು ಜಂಟಿ 20ನೇ ಸ್ಥಾನ ಗಳಿಸಿದರು.

ಇಲ್ಲಿನ ಕಸುಮಿಗಾಸೆಕಿ ಗಾಲ್ಫ್ ಅಂಗಣದಲ್ಲಿ ಶುಕ್ರವಾರ ಪ್ರತಿಕೂಲ ಹವಾಮಾನವು ಆಟಗಾರರಿಗೆ ಅಡ್ಡಿಯಾಯಿತು. ಹೀಗಾಗಿ ನಿಗದಿತ ಅವಧಿಗೂ ಮೊದಲೇ ಕೆಲವು ಸ್ಪರ್ಧೆಗಳನ್ನು ಸ್ಥಗಿತಗೊಳಿಸಲಾಯಿತು. ಶನಿವಾರ ಎರಡನೇ ಸುತ್ತಿನ ಈ ಸ್ಪರ್ಧೆಗಳನ್ನು ನಡೆಸಿ ಬಳಿಕ ಮೂರನೇ ಸುತ್ತುಗಳನ್ನು ಆರಂಭಿಸಲಾಗುತ್ತದೆ.

ಮೊದಲ ಸುತ್ತಿನಲ್ಲಿ ಲಾಹಿರಿ 8ನೇ ಸ್ಥಾನ ಗಳಿಸಿದ್ದರು. ಭಾರತದ ಇನ್ನೋರ್ವ ಆಟಗಾರ ಉದಯನ್ ಮಾನೆ ಸಾಧಾರಣ ಸಾಮರ್ಥ್ಯ ತೋರಿದರು. ಎರಡನೇ ಸುತ್ತಿನಲ್ಲಿ ಅವರು 57ನೇ ಸ್ಥಾನ ಗಳಿಸಿದರು.

ಈ ಸುತ್ತಿನಲ್ಲಿ ಅಮೆರಿಕದ ಜಾಂಡರ್ ಶಾಫಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಮೆಕ್ಸಿಕೊದ ಕಾರ್ಲೊಸ್ ಆರ್ಟಿಜ್ ಎರಡನೇ ಸ್ಥಾನದಲ್ಲಿದ್ದರು.

ಮೊದಲ ಸುತ್ತಿನಲ್ಲಿ ಮೊದಲ ಅಗ್ರಸ್ಥಾನದಲ್ಲಿದ್ದ ಆಸ್ಟ್ರಿಯದ ಸೆಪ್ ಸ್ಟ್ರಾಕಾ, ಚಿಲಿಯ ಮಿಟೊ ಪೆರೆರಾ, ಸ್ವೀಡನ್‌ನ ಅಲೆಕ್ಸ್ ನೊರೆನ್ ಹಾಗೂ ಜಪಾನ್‌ನ ಹಿಡೆಕಿ ಮತ್ಸುಯಾಮಾ, ಎರಡನೇ ಸುತ್ತಿನಲ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.