ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್: ಅಡ್‌ಹಾಕ್‌ ಸಮಿತಿಗೆ ರಾಜ್‌ಪಾಲ್‌ ಮುಖ್ಯಸ್ಥ

Published 13 ಜೂನ್ 2023, 19:05 IST
Last Updated 13 ಜೂನ್ 2023, 19:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಡೇವಿಡ್‌ ಕಪ್‌ ಟೆನಿಸ್‌ ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ಅವರನ್ನು ಭಾರತ ವಾಲಿಬಾಲ್‌ ಫೆಡರೇಷನ್‌ನ ದೈನಂದಿನ ಆಡಳಿತ ನೋಡಿಕೊಳ್ಳಲು ನೇಮಿಸಿರುವ ನಾಲ್ವರು ಸದಸ್ಯರ ಅಡ್‌ಹಾಕ್‌ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ರಾಜ್‌ಪಾಲ್‌ ನೇಮಕದ ವಿಷಯವನ್ನು ಐಒಎ ಸಿಇಒ ಆಗಿರುವ ಕಲ್ಯಾಣ್ ಚೌಬೆ ಅವರು ಅಂತರರಾಷ್ಟ್ರೀಯ ವಾಲಿಬಾಲ್‌ ಫೆಡರೇಷನ್‌ (ಎಫ್‌ಐವಿಬಿ), ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ, ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ ಮತ್ತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಮುಖೇನ ತಿಳಿಸಿದ್ದಾರೆ.

ರಾಜ್‌ಪಾಲ್‌ ನೇತೃತ್ವದ ಅಡ್‌ಹಾಕ್‌ ಸಮಿತಿಯಲ್ಲಿ ಅಲಕಾನಂದ ಅಶೋಕ್ (ಜಂಟಿ ಕಾರ್ಯದರ್ಶಿ, ಐಒಎ), ಎಸ್‌.ಗೋಪಿನಾಥ್ (ನಿವೃತ್ತ ಐಪಿಎಸ್‌ ಅಧಿಕಾರಿ) ಮತ್ತು ಸ್ಟೀಫನ್‌ ಬಾಕ್ (ಎಫ್‌ಐವಿಬಿ ಕಾನೂನು ವಿಭಾಗದ ಮುಖ್ಯಸ್ಥ) ಅವರು ಸದಸ್ಯರಾಗಿದ್ದಾರೆ.

ಎಫ್‌ಐವಿಬಿಯ ಶಿಫಾರಸಿನಂತೆ ಅಡ್‌ಹಾಕ್‌ ಸಮಿತಿಯ ನೇಮಕ ನಡೆದಿದ್ದು, ಭಾರತ ವಾಲಿಬಾಲ್‌ ಫೆಡರೇಷನ್‌ನ ಚುಣಾವಣೆ ನಡೆದು ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೆ ದೈನಂದಿನ ವ್ಯವಹಾರ ನೋಡಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT