ಚಂಡೀಗಢ: ತೂಕದ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ವಂಚಿತರಾದ ಕುಸ್ತಿಪಟು ವಿನೇಶ್ ಫೋಗಟ್ ಅವರು ಹರಿಯಾಣ ಸರ್ಕಾರವು ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ನೀಡಲು ಮುಂದಾದ ಪುರಸ್ಕಾರಗಳಲ್ಲಿ ₹4 ಕೋಟಿ ನಗದು ಬಹುಮಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಒಲಿಂಪಿಕ್ಸ್ನಲ್ಲಿ 50 ಕೆ.ಜಿ. ತೂಕದ ಮಹಿಳೆಯರ ವಿಭಾಗದಲ್ಲಿ ಅಂತಿಮ ಸುತ್ತಿಗೂ ಮೊದಲು ದೇಹತೂಕ ಹೆಚ್ಚಾದ ಕಾರಣದಿಂದ ಅನರ್ಹಗೊಂಡ ಫೋಗಟ್ ಅವರ ಕುರಿತು ಇಡೀ ದೇಶವೇ ಮಮ್ಮಲ ಮರುಗಿತ್ತು. ಮೂರು ಬಾರಿ ಒಲಿಂಪಿಕ್ ಪದಕ ವಿಜೇತೆಯಾದ ಫೋಗಟ್ ಅವರ 2024ರ ಸ್ಪರ್ಧೆ ಇಡೀ ಭಾರತೀಯರ ಹೃದಯ ಗೆದ್ದಿತ್ತು. ಇದಾದ ನಂತರ ಅವರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾದರು.

ಒಲಿಂಪಿಕ್ಸ್ ಪದಕ ವಂಚಿತರಾದ ಫೋಗಟ್ ಅವರಿಗೆ ಬೆಳ್ಳಿ ಪದಕದ ಸರಿಸಮಾನವಾಗಿ ಉಡುಗೊರೆ ನೀಡುವುದಾಗಿ ಸರ್ಕಾರ ಘೋಷಿಸಿತು. ಮೂರರಲ್ಲಿ ಒಂದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಫೋಗಟ್ಗೆ ನೀಡಿತು. ಇದರಲ್ಲಿ ₹4 ಕೋಟಿ ನಗದು, ಅತ್ಯುತ್ತಮ ಕ್ರೀಡಾಪಟುಗೆ ನೀಡುವ ‘ಎ‘ ಶ್ರೇಣಿಯ ನೌಕರಿ ಹಾಗೂ ಹರಿಯಾಣ ವಿಕಾಸ ಪ್ರಾಧಿಕಾರದ ನಿವೇಶನದಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸರ್ಕಾರ ಹೇಳಿತು.

ಇತ್ತೀಚೆಗೆ ವಿಧಾನಮಂಡಲದಲ್ಲಿ ಮಾತನಾಡಿದ್ದ ಫೋಗಟ್, ‘ವಿನೇಶ್ ಅವರು ನಮ್ಮ ಮಗಳಿದ್ದಂತೆ. ಅವರಿಗೆ ರಾಜ್ಯ ಸರ್ಕಾರವು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆಯಂತೆಯೇ ಗೌರವಿಸಲಿದೆ ಎಂದಿದ್ದರು. ಆದರೆ ಈವರೆಗೂ ಅದು ಈಡೇರಲಿಲ್ಲ’ ಎಂದು ಸರ್ಕಾರವನ್ನು ನೆನಪಿಸಿದ್ದರು.

‘ಇಲ್ಲಿ ಹಣ ಮುಖ್ಯವಲ್ಲ. ಬದಲಿಗೆ ಗೌರವ ಮುಖ್ಯ. ರಾಜ್ಯದ ಬಹಳಷ್ಟು ಜನರು ನಾನು ನಗದು ಪುರಸ್ಕಾರ ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ’ ಎಂದು ಫೋಗಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.