ಲಿವರ್ಪೂಲ್ (ಬ್ರಿಟನ್): ಭಾರತದ ಸುಮಿತ್ ಕುಂದು ಹಾಗೂ ನೀರಜ್ ಪೋಗಟ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಶುಭಾರಂಭ ಮಾಡಿದರು.

ಭರವಸೆಯ ಬಾಕ್ಸರ್ ಸುಮಿತ್ ಅವರು ಮಿಡ್ಲ್ವೇಟ್ ವಿಭಾಗದಲ್ಲಿ ಜೋರ್ಡಾನ್ನ ಮೊಹಮ್ಮದ್ ಅಲ್ ಹುಸೇನ್ ಅವರನ್ನು 5–0 ಬೌಟ್ಗಳಲ್ಲಿ ಮಣಿಸಿದರು. ಚುರುಕಾದ ಹೊಡೆತ ಹಾಗೂ ಬಲಿಷ್ಠ ಪಂಚ್ಗಳೊಂದಿಗೆ ಆರಂಭದಿಂದಲೇ ಪಂದ್ಯದ ಹಿಡಿತ ಸಾಧಿಸಿದ ಅವರು, ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.

ಸುಮಿತ್, ಮುಂದಿನ ಸುತ್ತಿನಲ್ಲಿ ಹಾಲಿ ಯುರೋಪಿಯನ್ ಚಾಂಪಿಯನ್ ರಮಿ ಕಿವಾನ್ (ಬಲ್ಗೇರಿಯಾ) ಎದುರು ಸೆಣಸಬೇಕಿದೆ. ಪ್ಯಾರಿಸ್ ಒಲಿಂಪಿಕ್ ಸ್ಪರ್ಧಿಯೂ ಆಗಿರುವ ರಮಿ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಮಹಿಳೆಯರ 65 ಕೆ.ಜಿ. ವಿಭಾಗದಲ್ಲಿ ನೀರಜ್ ಅವರು 3–2ರಿಂದ ಫಿನ್ಲೆಂಡ್ನ ಕ್ರಿಸ್ಟಾ ಕೊವಲೈನೆನ್ ಎದುರು ಗೆಲುವು ಸಾಧಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಗೆಲ್ಲಲು ನೀರಜ್ ಹೆಚ್ಚಿನ ಶ್ರಮ ಹಾಕಬೇಕಾಯಿತು.

ಇದಕ್ಕೂ ಮೊದಲು, ಮಹಿಳೆಯರ 70 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಸನಾಮಾಚ ಚಾನು ಅವರು 4–1ರಿಂದ ಡೆನ್ಮಾರ್ಕ್ನ ಡಿಟ್ಟೆ ಫ್ರೋಸ್ಟೊಮ್ ಅವರನ್ನು ಅಧಿಕಾರಯುತವಾಗಿ ಮಣಿಸಿದರು. ಮಣಿಪುರದ ಈ ಆಟಗಾರ್ತಿಯು ಪ್ರಿಕ್ವಾರ್ಟರ್ಫೈನಲ್ನಲ್ಲಿ ವಿಶ್ವ ಬಾಕ್ಸಿಂಗ್ ಕಪ್ ಚಿನ್ನದ ಪದಕ ವಿಜೇತೆ ನಟಾಲ್ಯ ಬೊಗ್ದನೊವಾ ಅವರ ಸವಾಲು ಎದುರಿಸಬೇಕಿದೆ.

ಆದರೆ, ಹೆವಿ ವೇಟ್ ವಿಭಾಗದಲ್ಲಿ ಸ್ಪರ್ಧಿಸಿರುವ ಹರ್ಷ್ ಚೌಧರಿ ಅವರು ಪೋಲೆಂಡ್ನ ಟೂಟಕ್ ಆ್ಯಡಮ್ಸ್ ಎದುರು ಸೋತು ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.