ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೇಬಲ್‌ ಟೆನಿಸ್‌: ಮಣಿಕಾ ಮುನ್ನಡೆ

Published 23 ಮೇ 2023, 23:45 IST
Last Updated 23 ಮೇ 2023, 23:45 IST
ಅಕ್ಷರ ಗಾತ್ರ

ಡರ್ಬನ್‌: ಭಾರತದ ಮಣಿಕಾ ಬಾತ್ರಾ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಪ್ರಿಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ವಿಶ್ವದ 39ನೇ ಕ್ರಮಾಂಕದ ಮಣಿಕಾ ಮಂಗಳವಾ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 11–9, 14–12, 11–4, 11–8 ರಿಂದ ವೊಂಗ್‌ ಕ್ಸಿನ್‌ ರು ಅವರನ್ನು ಸೋಲಿಸಿದರು.

ವಿಶ್ವ ಕ್ರಮಾಂಕದಲ್ಲಿ 171ನೇ ಸ್ಥಾನದಲ್ಲಿರುವ ವೊಂಗ್‌ ಮೇಲಿನ ಗೆಲುವಿನಿಂದ ಅವರು ಸಿಂಗಲ್ಸ್‌ನಲ್ಲಿ 32ರ ಸುತ್ತು ತಲುಪಿದ ಭಾರತದ ಏಕೈಕ ಆಟಗಾರ್ತಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶರತ್‌ ಕಮಲ್ ಮತ್ತು ಜಿ.ಸತ್ಯನ್‌ ಬೇಗನೇ ನಿರ್ಗಮಿಸಿದ್ದರು. ಶರತ್‌ ಸೋಮವಾರ ಹೊರಬಿದ್ದರೆ, ಸತ್ಯನ್‌ ಮಂಗಳವಾರ ನಡೆದ ಪಂದ್ಯದಲ್ಲಿ ವಿಶ್ವದ 9ನೇ ಕ್ರಮಾಂಕದ ಆಟಗಾರ ಡಾಂಗ್‌ ಕ್ಸಿಯು ಎದುರು 6–11, 6–11, 5–11, 7–11 ರಲ್ಲಿ ಸೋಲನುಭವಿಸಿದರು.

ಮಣಿಕಾ ಮತ್ತು ಸತ್ಯನ್‌ ಮಿಕ್ಸೆಡ್‌ ಡಬಲ್ಸ್‌ ಪಂದ್ಯ ಆಡಬೇಕಿದೆ. ಶರತ್ ಮತ್ತು ಸತ್ಯನ್‌ ಪುರುಷರ ಡಬಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯವನ್ನು ಬುಧವಾರ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT