ನಾಳೆ ಆಲ್‌ಸ್ಟಾರ್‌ ಕಬಡ್ಡಿ ಪಂದ್ಯ

ಸೋಮವಾರ, ಜೂಲೈ 15, 2019
29 °C

ನಾಳೆ ಆಲ್‌ಸ್ಟಾರ್‌ ಕಬಡ್ಡಿ ಪಂದ್ಯ

Published:
Updated:

ಬೆಂಗಳೂರು: ವಿವೊ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಏಳನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಇದಕ್ಕೂ ಮುನ್ನ ಆಲ್‌ಸ್ಟಾರ್‌ ಕಬಡ್ಡಿ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಹಣಾಹಣಿಯಲ್ಲಿ ಇಂಡಿಯನ್‌–7 ಮತ್ತು ವರ್ಲ್ಡ್‌–7 ತಂಡಗಳು ಪೈಪೋಟಿ ನಡೆಸಲಿವೆ.

ಇಂಡಿಯನ್‌–7 ತಂಡವನ್ನು ಅಜಯ್‌ ಠಾಕೂರ್‌ ಮುನ್ನಡೆಸಲಿದ್ದಾರೆ. ಈ ತಂಡಕ್ಕೆ ಬಲವಾನ್‌ ಸಿಂಗ್‌ ಅವರ ಮಾರ್ಗದರ್ಶನವಿದೆ.

ಫಜೆಲ್‌ ಅತ್ರಾಚಲಿ, ವರ್ಲ್ಡ್‌–7 ತಂಡದ ಸಾರಥ್ಯ ವಹಿಸಲಿದ್ದಾರೆ. ಇ.ಪಿ.ರಾವ್‌ ಅವರು ಈ ತಂಡದ ಕೋಚ್‌ ಆಗಿದ್ದಾರೆ. ಈ ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಲೀಗ್‌ನ ಏಳನೇ ಆವೃತ್ತಿಗೆ ಜುಲೈ 20ರಂದು ಚಾಲನೆ ಸಿಗಲಿದೆ. ಗಚಿಬೌಲಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ.

ದಿನದ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮತ್ತು ಮೂರು ಬಾರಿಯ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಸೆಣಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !