ಗುರುವಾರ , ಜೂನ್ 24, 2021
25 °C

ಬಾಕ್ಸಿಂಗ್: ಭಾರತ ತಂಡದಲ್ಲಿ ಅಮಿತ್‌, ವಿಕಾಸ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮಿತ್ ಪಂಘಾಲ್ ಮತ್ತು ವಿಕಾಸ್ ಕೃಷನ್ ಸೇರಿದಂತೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಬಹುತೇಕ ಎಲ್ಲ ಬಾಕ್ಸರ್‌ಗಳು ಕೂಡ ದುಬೈಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 

ಹಾಲಿ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿರುವ ಅಮಿತ್ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು ವಿಕಾಸ್ ಕೃಷನ್ 69 ಕೆಜಿಯಲ್ಲಿ ಮತ್ತು ಆಶಿಶ್ ಕುಮಾರ್ 75 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ನವದೆಹಲಿಯಲ್ಲಿ ನಡೆಯಬೇಕಾಗಿದ್ದ ಚಾಂಪಿಯನ್‌ಷಿಪನ್ನು ಕೋವಿಡ್‌ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ದುಬೈಗೆ ಸ್ಥಳಾಂತರಿಸಲಾಗಿತ್ತು. ಮೇ 24ರಂದು ಸ್ಪರ್ಧೆಗಳು ಆರಂಭವಾಗಲಿವೆ. ಭಾರತ ತಂಡ 21ರಂದು ದುಬೈಗೆ ಪಯಣಿಸಲಿದೆ.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಮನೀಷ್ ಕೌಶಿಕ್ ಮತ್ತು ಸತೀಶ್ ಕುಮಾರ್ ತಂಡದಲ್ಲಿಲ್ಲ. ಕೋವಿಡ್‌ ಸೋಂಕಿಗೆ ಒಳಗಾಗಿರುವ ಅವರು ಇನ್ನೂ ಗುಣಮುಖರಾಗಿಲ್ಲ. ಕೌಶಿಕ್ ಬದಲಿಗೆ ಶಿವ ಥಾಪಾ ಅವರನ್ನು ಮತ್ತು ಸತೀಶ್ ಬದಲಿಗೆ ನರೇಂದರ್ ಅವರನ್ನು ಕರೆಸಿಕೊಳ್ಳಲಾಗಿದೆ.

ತಂಡ: ವಿನೋದ್ ತನ್ವರ್ (49 ಕೆಜಿ), ಅಮಿತ್ ಪಂಘಾಲ್ (52 ಕೆಜಿ), ಮೊಹಮ್ಮದ್ ಹಸಮುದ್ದೀನ್ (56 ಕೆಜಿ), ವರಿಂದರ್ ಸಿಂಗ್ (60 ಕೆಜಿ), ಶಿವ ಥಾಪಾ (64 ಕೆಜಿ), ವಿಕಾಸ್ ಕೃಷನ್ (69 ಕೆಜಿ), ಆಶಿಶ್‌ ಕುಮಾರ್ (75 ಕೆಜಿ), ಸುಮಿತ್ ಸಾಂಗ್ವಾನ್ (81 ಕೆಜಿ), ಸಂಜೀತ್ (91 ಕೆಜಿ), ನರೇಂದರ್‌ (+91 ಕೆಜಿ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು