ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಅಮಿತ್ ಸೆಮಿಫೈನಲ್‌ಗೆ

ಗವರ್ನರ್ಸ್‌ ಕಪ್ ಟೂರ್ನಿ: ಮೊದಲ ಸುತ್ತಿನಲ್ಲೇ ಹೊರಬಿದ್ದ ಸುಮಿತ್, ನಮನ್‌, ವಿನೋದ್‌
Last Updated 22 ಏಪ್ರಿಲ್ 2021, 13:06 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್ ಟಿಕೆಟ್ ಪಡೆದಿರುವ ಮತ್ತು ವಿಶ್ವ ಬಾಕ್ಸಿಂಗ್ ಚಾಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಅಮಿತ್ ಫಂಗಲ್ ಅವರು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಗವರ್ನರ್ಸ್ ಕಪ್ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಹರಿಯಾಣದ ಅಮಿತ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ತಮೀರ್ ಗಲನೊವ್‌ ವಿರುದ್ಧ 5–0 ಅಂತರದ ಜಯ ಗಳಿಸಿದರು. ಆದರೆ ಭಾರತದ ಉಳಿದ ಐವರು ಮೊದಲ ಸುತ್ತಿನಲ್ಲೇ ಹೊರಬಿದ್ದರು.

81 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮಿತ್ ಸಾಂಗ್ವಾನ್‌, 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೊಹಮ್ಮದ್ ಹೊಸಮುದ್ದೀನ್‌, 91 ಕೆಜಿ ವಿಭಾಗದ ಸ್ಪರ್ಧಾಳು ನಮನ್ ತನ್ವರ್‌, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಆಶಿಶ್‌ ಕುಮಾರ್ (75 ಕೆಜಿ) ಮತ್ತು ವಿನೋದ್ ತನ್ವರ್ (49 ಕೆಜಿ) ನಿರಾಸೆಗೊಂಡರು.

ರಷ್ಯಾದ ಇಗೊರ್‌ ಸರೆಗೊಡ್ಸೆವ್‌ ವಿರುದ್ಧ ವಿನೋದ್‌ 2–3ರಲ್ಲಿ ಸೋತರೆ ಸುಮಿತ್‌ 0–5ರಲ್ಲಿ ಉಜ್ಬೆಕಿಸ್ತಾನದ ದಿಶೋದ್‌ ರುಜ್ಮೆಟೊವ್‌ಗೆ ಮಣಿದರು. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ನಮನ್‌ 0–5ರಲ್ಲಿ ಕಜಕಸ್ತಾನದ ಅಯಬೆಕ್‌ ಒರಲ್ಬೆಗೆ ಮಣಿದರು. ರಷ್ಯಾದ ನಿಕಿತ ಕುಜ್ಮಿನ್ ವಿರುದ್ಧ ಆಶಿಶ್‌ 2–3ರಲ್ಲಿ ಸೋತರು. ಹೊಸಮುದ್ದೀನ್‌ ಉಜ್ಬೆಕಿಸ್ತಾನದ ಮಿರಜಿವ್‌ ಮುರ್ಜಕಿಲೊವ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT