ಬುಧವಾರ, ಫೆಬ್ರವರಿ 19, 2020
18 °C

ಏಷ್ಯನ್‌ ಕ್ರೀಡಾಕೂಟ: ಸ್ಕ್ವಾಷ್‌ನಲ್ಲಿ ಭಾರತ ಮಹಿಳಾ ತಂಡ ಫೈನಲ್‌ಗೆ, ಬೆಳ್ಳಿ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತ: ಏಷ್ಯನ್‌ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಮಹಿಳೆಯರ ಸ್ಕ್ವಾಷ್‌ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಚಾಂಪಿಯನ್‌ ಮಲೇಷ್ಯಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ.

ಭಾರತ ತಂಡ ಮಲೇಷ್ಯಾವನ್ನು 2–0 ಅಂತರದಲ್ಲಿ ಸೋಲಿಸಿತು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿಪದಕವನ್ನು ಖಚಿತಪಡಿಸಿದೆ.

ಭಾರತ ತಂಡದಲ್ಲಿ ಜೋಷ್ನ ಚಿನ್ನಪ್ಪ, ದೀಪಿಕಾ ಪಲಿಕಲ್‌ ಕಾರ್ತಿಕ್‌, ಸುನೈನಾ ಕುರುವಿಲ್ಲಾ ಮತ್ತು ತನ್ವಿ ಖನ್ನಾ ಅವರನ್ನೊಳಗೊಂಡ ತಂಡವು ಮಲೇಷ್ಯಾ ತಂಡವನ್ನು ಮಣಿಸಿ, ಗೆಲುವಿನ ನಗೆ ಬೀರಿತು.

ಭಾರತ ಪುರುಷ ತಂಡ ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ ವಿರುದ್ಧ ಆಡಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು