ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಗನ್ ಚಾಂಪಿಯನ್‌ಷಿಪ್‌: ಭಾರತ ತಂಡಗಳಿಗೆ ಚಿನ್ನ

Last Updated 13 ನವೆಂಬರ್ 2022, 21:00 IST
ಅಕ್ಷರ ಗಾತ್ರ

ನವದೆಹಲಿ:ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳ ಪದಕಬೇಟೆ ಮುಂದುವರಿದಿದೆ.

ದಕ್ಷಿಣ ಕೊರಿಯಾದ ಡೇಗುನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಭಾರತದವರು ತಂಡ ವಿಭಾಗದ ಎಲ್ಲ ನಾಲ್ಕೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪುರುಷರ ಏರ್‌ ರೈಫಲ್‌ ವಿಭಾಗದಲ್ಲಿ ಭಾರತದ ಅರ್ಜುನ್ ಬಬುತಾ, ಕಿರಣ್ ಜಾಧವ್‌ ಮತ್ತು ರುದ್ರಾಕ್ಷ್‌ ಪಾಟೀಲ್‌ 17–11ರಿಂದ ಕಜಕಸ್ತಾನ ಶೂಟರ್‌ಗಳನ್ನು ಮಣಿಸಿ ಅಗ್ರಸ್ಥಾನ ಗಳಿಸಿದರು. ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಮೆಹುಲಿ ಘೋಷ್‌, ಇಳವೆನ್ನಿಲ ವಾಳರಿವನ್‌ ಮತ್ತು ಮೇಘನಾ ಸಜ್ಜನರ್ 16–10ರಿಂದ ಕೊರಿಯಾ ತಂಡಕ್ಕೆ ಸೋಲುಣಿಸಿ ಚಿನ್ನಕ್ಕೆಕೊರಳೊಡ್ಡಿದರು.

ದಿವ್ಯಾಂಶ್ ಸಿಂಗ್ ಪನ್ವಾರ್, ಶ್ರೀ ಕಾರ್ತಿಕ್ ಸಬರಿ ರಾಜ್ ರವಿಶಂಕರ್ ಮತ್ತು ವಿದಿತ್ ಜೈನ್ ಅವರನ್ನೊಳಗೊಂಡ ಪುರುಷರ ಜೂನಿಯರ್ ತಂಡವು ಫೈನಲ್‌ನಲ್ಲಿ 16–10ರಿಂದ ಕೊರಿಯಾ ತಂಡವನ್ನು ಮಣಿಸಿ ಚಿನ್ನ ತನ್ನದಾಗಿಸಿಕೊಂಡಿತು.

ಇದೇ ವಿಭಾಗದ ಭಾರತದ ಮಹಿಳೆಯರೂ ಅಗ್ರಸ್ಥಾನ ಗಳಿಸಿದರು. ತಿಲೋತ್ತಮಾ ಸೇನ್‌, ರಮಿತಾ ಮತ್ತು ನ್ಯಾನ್ಸಿ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ 16–2ರಿಂದ ಕೊರಿಯಾ ತಂಡಕ್ಕೆ ಸೋಲುಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT