ಚೆನ್ನೈ: ಏಷ್ಯನ್ ನೇಷನ್ಸ್ ಕಪ್ಆನ್ಲೈನ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಪಟುಗಳು ಶುಕ್ರವಾರ ಉತ್ತಮ ಸಾಮರ್ಥ್ಯ ತೋರಿದರು. ಒಂದು ಗೆಲುವು ಹಾಗೂ ಎರಡು ಸುತ್ತುಗಳಲ್ಲಿ ಡ್ರಾ ಸಾಧಿಸಿದ ತಂಡ, ಆರು ಸುತ್ತುಗಳ ಅಂತ್ಯಕ್ಕೆ ನಾಲ್ಕನೇ ಸ್ಥಾನದಲ್ಲಿತ್ತು.

ಅಗ್ರ ಶ್ರೇಯಾಂಕ ಪಡೆದಿರುವ ಭಾರತ ತಂಡದ ಆಟಗಾರರು ಮೂರು ಸುತ್ತುಗಳ ಬಳಿಕ ಆರನೇ ಸ್ಥಾನದಲ್ಲಿದ್ದರು. ಆರನೇ ಸುತ್ತಿನಲ್ಲಿ ಪ್ರಬಲ ತಂಡವಾದ ಕಜಕಸ್ತಾನದೊಂದಿಗೆ ಭಾರತ 2–2ರ ಡ್ರಾ ಸಾಧಿಸಿತು. ಇದಕ್ಕೂ ಮೊದಲು 3.5–0.5 ಪಾಯಿಂಟ್ಸ್ನಿಂದ ಜೋರ್ಡಾನ್ ತಂಡವನ್ನು ಮಣಿಸಿದ್ದ ತಂಡ, ಇಂಡೊನೇಷ್ಯಾದೊಂದಿಗೆ 2–2ರಿಂದ ಡ್ರಾ ಮಾಡಿಕೊಂಡಿತ್ತು.

ಕಜಕಸ್ತಾನ ಎದುರಿನ ಹಣಾಹಣಿಯಲ್ಲಿ 16 ವರ್ಷದ ನಿಹಾಲ್ ಸರಿನ್ ಹಾಗೂ ಅನುಭವಿ ಕೃಷ್ಣನ್ ಶಶಿಕಿರಣ್ ಅವರು ಕ್ರಮವಾಗಿ ರುಸ್ತುಂ ಕುಸ್ನುಟಿದೊವ್ ಹಾಗೂ ಡೆನಿಸ್ ಮಖ್ನೆವ್ ಎದುರು ಗೆದ್ದು ಬೀಗಿದರು. ಬಿ. ಅದಿಬನ್ ಹಾಗೂ ತಂಡದ ನಾಯಕ ಸೂರ್ಯಶೇಖರ್ ಗಂಗೂಲಿ ಅವರು ತಾವಾಡಿದ ಪಂದ್ಯಗಳನ್ನು ಸೋತರು.

ಇದುವರೆಗೆ ಟೂರ್ನಿಯಲ್ಲಿ ಶಶಿಕಿರಣ್ ತಾನಾಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಗಂಗೂಲಿ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ವಿಜಯ ಸಾಧಿಸಿದ್ದಾರೆ.

ಆರು ಸುತ್ತುಗಳ ಅಂತ್ಯಕ್ಕೆ ಭಾರತ ಒಂಬತ್ತು ಮ್ಯಾಚ್ ಪಾಯಿಂಟ್ಸ್ (ಜಯ ಗಳಿಸಿದರೆ ಎರಡು ಹಾಗೂ ಡ್ರಾ ಸಾಧಿಸಿದರೆ ಒಂದು ಪಾಯಿಂಟ್ ನೀಡಲಾಗುತ್ತದೆ) ಕಲೆಹಾಕಿದೆ. ಟೂರ್ನಿಯಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅಷ್ಟೇ ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಪ್ರಮುಖ ಆಟಗಾರರಾದ ವಿಶ್ವನಾಥನ್ ಆನಂದ್ ಹಾಗೂ ವಿದಿತ್ ಗುಜರಾಥಿ ಅವರು ಭಾರತ ತಂಡದಲ್ಲಿ ಇಲ್ಲ.

11 ಪಾಯಿಂಟ್ಸ್ ಹೊಂದಿರುವ ಇರಾನ್ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಹಾಗೂ ಕಜಕಸ್ತಾನ ತಲಾ 10 ಪಾಯಿಂಟ್ಸ್ನೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.