ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಪುಟ್ಟ ಬಾಲೆಯರ ದಿಟ್ಟ ಸಾಧನೆ

ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಸ್ಕೇಟ್‌ಬೋರ್ಡ್‌ ಸ್ಪರ್ಧೆಯಲ್ಲಿ ಮಿಂಚಿದ ಬಾಲಕಿಯರು
Last Updated 27 ಜುಲೈ 2021, 19:31 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್ ವಿಜಯವೇದಿಕೆಯಲ್ಲಿ ಹಿಂದೆಂದೂ ಕಾಣದಂತಹ ಅಪರೂಪದ ದೃಶ್ಯ ಗಮನ ಸೆಳೆಯಿತು. 13 ವರ್ಷದ ಇಬ್ಬರು ಮತ್ತು 16 ವರ್ಷದ ಒಬ್ಬ ಬಾಲಕಿಯ ಕೊರಳಲ್ಲಿ ಪದಕಗಳನ್ನು ಧರಿಸಿಕೊಂಡು ಸಂತಸದ ನಗೆಯಲ್ಲಿ ತೇಲುತ್ತಿದ್ದರು. ಅವರ ಪುಟ್ಟ ಕಂಗಳದಲ್ಲಿ ಹರ್ಷ ಹೊನಲಾಗಿತ್ತು.

ಇದೇ ಮೊದಲ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರಂಭಿಸಲಾಗಿರುವ ಸ್ಕೇಟ್‌ಬೋರ್ಡ್‌ ಸ್ಪರ್ಧೆಯಲ್ಲಿ ಪದಕ ವಿಜೇತರಾದ ಹುಡುಗಿಯರು ಅವರು. 13 ರ ಬಾಲೆ ಜಪಾನಿನ ಮೊಮಿಜಿ ನಿಶಿಯಾ ಚಿನ್ನದ ಪದಕ, ಬೆಳ್ಳಿ ಜಯಿಸಿದ ಬ್ರೆಜಿಲ್‌ನ ರಯಸಾ ಲೀಲ್ ಕೂಡ ಅದೇ ವಯಸ್ಸಿನ ಹುಡುಗಿ. ಇವರಿಬ್ಬರಿಗಿಂತ ಮೂರು ವರ್ಷ ದೊಡ್ಡವಳಾದ ಫುನಾ ನಕಾಯಾಮಾ ಜಪಾನಿಗೆ ಕಂಚಿನ ಪದಕದ ಕಾಣಿಕೆ ನೀಡಿದರು.

ಬಹುತೇಕ ರಾಷ್ಟ್ರಗಳಲ್ಲಿ ದಿಟ್ಟೆದೆಯ ಯುವಕರ ಸಾಹಸ ಕ್ರೀಡೆಯಾಗಿಯೇ ಬಿಂಬಿಸಲಾಗಿರುವ ಸ್ಕೇಟ್‌ಬೋರ್ಡ್‌ನಲ್ಲಿ ಈ ಬಾಲಕಿಯರು ಅಮೋಘ ಕೌಶಲಗಳನ್ನು ತೋರಿಸಿದರು. ವೇಗ, ಲಾಸ್ಯ ಮತ್ತು ಮೊನಚಾದ ತಿರುವುಗಳು, ಕಿರಿದಾದ ರೇಲಿಂಗ್, ರಸ್ತೆಗಳಲ್ಲಿ ಜಿಗಿಯುತ್ತ, ಪುಟಿಯುತ್ತ ಬೋರ್ಡ್‌ ರೇಸ್ ಮಾಡಿ ಬೆರಗುಗೊಳಿಸಿದರು.

ಮಹಿಳೆಯರ ವಿಭಾಗದಲ್ಲಿ 20 ಸ್ಪರ್ಧಿಗಳು ಇದ್ದರು.

‘ಭವಿಷ್ಯದಲ್ಲಿ ಈ ಕ್ರೀಡೆಗೆ ಇನ್ನೂ ಹೆಚ್ಚು ಜನಪ್ರಿಯತೆ ದೊರೆಯಲಿದೆ. ಇವತ್ತಿನ ಈ ಸ್ಪರ್ಧೆ ನೋಡಿ ಕನಿಷ್ಠ 500 ಹುಡುಗಿಯರಾದರೂ ಸ್ಕೇಟ್‌ಬೋರ್ಡ್‌ ಆಡಲು ಆರಂಭಿಸುತ್ತಾರೆ. ಇದರಲ್ಲಿ ಅಚ್ಚರಿಯಿಲ್ಲ’ ಎಂದು ಅಮೆರಿಕದ ಸ್ಕೇಟರ್ ಮರಿಯಾ ಡುರಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT