ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಕಪ್ಪು ಟಿ–ಶರ್ಟ್‌; ರಾಜಕೀಯ ವಿವಾದ

Last Updated 26 ಜುಲೈ 2021, 19:31 IST
ಅಕ್ಷರ ಗಾತ್ರ

ಹಾಂಕಾಂಗ್‌: ಪಂದ್ಯದ ವೇಳೆ ಹಾಂಕಾಂಗ್ ಆಟಗಾರ ಕಪ್ಪು ಟಿ–ಶರ್ಟ್ ಧರಿಸಿದ್ದು ವಿವಾದ ಸೃಷ್ಟಿಸಿದ್ದು ಚೀನಾದ ರಾಷ್ಟ್ರೀಯವಾದಿ ಮುಖಂಡರು ಆಟಗಾರನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಹಾಂಕಾಂಗ್ ತಂಡ ಆಟಗಾರನ ಬೆಂಬಲಕ್ಕೆ ನಿಂತಿದೆ.

ಶನಿವಾರ ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಅಂಗಸ್ ನಂಗ್ ಕ ಲಾಂಗ್ ತಂಡದ ಪೋಷಾಕಿ ಬದಲು ಕಪ್ಪು ಬಟ್ಟೆ ತೊಟ್ಟು ಆಡಿದ್ದರು. ಅದರ ಮೇಲೆ ಅವರ ಹೆಸರು ಮತ್ತು ಹಾಂಕಾಂಗ್, ಚೀನಾ ಎಂದು ಬರೆದಿತ್ತು. ಹಾಂಕಾಂಗ್‌ನ ಪ್ರಜಾಪ್ರಭುತ್ವ ಹೋರಾಟದ ಸಂಕೇತವಾಗಿ ಕೆಲವೊಮ್ಮೆ ಕಪ್ಪು ಟಿ–ಶರ್ಟ್‌ ಬಳಸಲಾಗುತ್ತಿದೆ. ಹಾಂಕಾಂಗ್‌ನ ಇತರ ಕ್ರೀಡಾಪಟುಗಳು ತಂಡದ ಪೋಷಾಕು ತೊಟ್ಟು ಕಣಕ್ಕೆ ಇಳಿದಿದ್ದಾರೆ. ಅದರಲ್ಲಿ ಯೋನೆಕ್ಸ್‌ ಮತ್ತು ಹಾಂಕಾಂಗ್‌ನ ಲಾಂಛನವನ್ನು ಮುದ್ರಿಸಲಾಗಿದೆ.

ಇಬ್ಬರು ರಾಷ್ಟ್ರೀಯವಾದಿ ಮುಖಂಡರು ಅಂಗಸ್ ನಂಗ್ ಕ್ರಮವನ್ನು ವಿರೋಧಿಸಿದ್ದು ಅವರ ಪೈಕಿ ಒಬ್ಬರು ಕಪ್ಪು ಬಣ್ಣವು ಪ್ರಜಾಪ್ರಭುತ್ವ ಹೋರಾಟದ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಂಗಸ್ ನಂಗ್ ತಾವು ತೊಟ್ಟಿರುವ ಬಟ್ಟೆಗೆ ರಾಜಕೀಯ ಬಣ್ಣ ಇಲ್ಲ ಎಂದಿದ್ದಾರೆ. ತಮ್ಮನ್ನು ಯೊನೆಕ್ಸ್‌ ಪ್ರಾಯೋಜಿಸುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT