ಮಂಗಳವಾರ, ಜೂನ್ 22, 2021
22 °C
ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ ಸುಗಮವಾಗಿ ನಡೆಯಲು ಈ ನಿರ್ಧಾರ

2021ರ ಯೂತ್‌ ಕ್ರೀಡಾಕೂಟ ‌2023ಕ್ಕೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2021ರಲ್ಲಿ ನಿಗದಿಯಾಗಿದ್ದ ಕಾಮನ್‌ವೆಲ್ತ್‌ ಯೂತ್‌ ಕ್ರೀಡಾಕೂಟವನ್ನು ಶುಕ್ರವಾರ 2023ಕ್ಕೆ ಮುಂದೂಡಲಾಗಿದೆ. 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ ಕೂಡ ಆಯೋಜನೆಯಾಗಿದೆ. ಹೀಗಾಗಿ ಎರಡೂ ಕೂಟಗಳು ಏಕಕಾಲದಲ್ಲಿ ನಡೆಯುವುದನ್ನು ತಪ್ಪಿಸಲು  ಕಾಮನ್‌ವೆಲ್ತ್‌ ಗೇಮ್ಸ್ ಫೆಡರೇಷನ್‌ (ಸಿಜಿಎಫ್‌) ಈ ನಿರ್ಧಾರಕ್ಕೆ ಬಂದಿದೆ.

ಟೋಕಿಯೊ ಕೂಟವನ್ನು ಮೊದಲು ಈ ವರ್ಷದ ಜುಲೈ 23ರಿಂದ ಆಗಸ್ಟ್‌ 8ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ  ವೈರಾಣು ಉಪಟಳದ ಹಿನ್ನೆಲೆಯಲ್ಲಿ ಒಂದು ವರ್ಷ ಮುಂದಕ್ಕೆ ಹೋಗಿದೆ.

‘ಕಾಮನ್‌ವೆಲ್ತ್‌ ಯೂತ್‌ ಕ್ರೀಡಾಕೂಟದ ದಿನಾಂಕವನ್ನು ಪರಿಷ್ಕರಿಸಲು ಸಿಜಿಎಫ್‌ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಕೊರೊನಾ ಮಹಾಮಾರಿಯ ಹಾವಳಿಯ ಹಿನ್ನೆಲೆಯಲ್ಲಿ, ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಕೂಟಗಳು, ಯೂತ್‌ ಕ್ರೀಡಾಕೂಟ ನಡೆಬೇಕಿದ್ದ ಅವಧಿಯಲ್ಲೇ ಆಯೋಜನೆಯಾಗಿವೆ. ಆದ್ದರಿಂದ ಅವೆರಡೂ ಕೂಟಗಳು (ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌) ಸುಗಮವಾಗಿ ನಡೆಯುವ ಉದ್ದೇಶದಿಂದ ಯೂತ್‌ ಕ್ರೀಡಾಕೂಟವನ್ನು 2023ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಸಿಜಿಎಫ್‌ ಹೇಳಿದೆ. 

ಏಳನೇ ಕಾಮನ್‌ವೆಲ್ತ್‌ ಯೂತ್ ಕ್ರೀಡಾಕೂಟವು 2021ರ ಆಗಸ್ಟ್‌ 1ರಿಂದ 7ರವರೆಗೆ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೋದಲ್ಲಿ ನಿಗದಿಯಾಗಿತ್ತು.

‘2023ರಲ್ಲಿ ಕೂಟ ನಡೆದರೆ ಅದರ ಆಯೋಜನೆಗೆ ಕೆರಿಬಿಯನ್‌ ರಾಷ್ಟ್ರಕ್ಕೇ ಮೊದಲ ಆದ್ಯತೆ ಇರಲಿದೆ. ಅಥ್ಲೀಟುಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಿಜಿಎಫ್‌ ಅಧ್ಯಕ್ಷ ಡೇಮ್‌ ಲೂಯಿಸ್‌ ಮಾರ್ಟಿನ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು